‘ಮನೆಮನೆಗೆ ಪೊಲೀಸ್’ ಕಾರ್ಯಕ್ರಮದ ಭಾಗವಾಗಿ ದೃಷ್ಠಿ ಯೋಜನೆಗೆ ಚಾಲನೆ
ಬಳಿಕ ಅವರು ಮಾತನಾಡಿ, ಜಿಲ್ಲೆಯ ಪ್ರತೀ ಠಾಣಾ ವ್ಯಾಪ್ತಿಯು ದೊಡ್ಡದ್ದಾಗಿದ್ದು, ಪ್ರತೀ ಬೀಟ್ನಲ್ಲಿ ಸುಮಾರು 80 ರಿಂದ 100 ಮನೆಗಳ ಒಂದು ‘ವೆಲ್ ಫೇರ್’ ಕಮಿಟಿಯನ್ನು ರಚಿಸಿ, ಆ ಕಮಿಟಿಯಿಂದ ಓರ್ವ ಪ್ರಾವೇಟ್ ಸೆಕ್ಯೂರಿಟಿ ಗಾರ್ಡ್ನ್ನು ನೇಮಿಸಿ, ಈ ಬೀಟ್ಗಳಲ್ಲಿ ರಾತ್ರಿ ಗಸ್ತು ಕರ್ತವ್ಯವನ್ನು ನಿರ್ವಹಿಸುವಂತೆ ಮಾಡಲಾಗುವುದು ಹಾಗೂ ಬೀಟ್ ಪೊಲೀಸರು ಈ ಪ್ರಾವೇಟ್ ಸೆಕ್ಯೂರಿಟಿ ಗಾರ್ಡ್ನ ನಿರಂತರ ಸಂಪರ್ಕದಲ್ಲಿರುತ್ತಾರೆ. ಇದು ಅವರ ಮನೆಗಳಿಗೆ ರಕ್ಷಣೆಯನ್ನು ನೀಡುವಲ್ಲಿ ಸಹಕಾರಿಯಾಗಲಿದೆ ಎಂದರು.
ಈ ರೀತಿ ಕಮಿಟಿಗಳನ್ನು ಮಾಡುವುದರಿಂದ ಆ ಪ್ರದೇಶದಲ್ಲಿ ವಾಸವಾಗಿರುವ ಜನರ ರಕ್ಷಣೆ, ವಯೋವೃದ್ಧರ ಕಾಳಜಿ, ರಾತ್ರಿ ಗಸ್ತು ಮಾಡುವುದರಿಂದ ಆಸ್ತಿಪಾಸ್ತಿ, ಜೀವರಕ್ಷಣೆಗಳನ್ನು ಮಾಡಬಹುದಾಗಿದೆ. ಈ ವರೆಗೆ ಉಡುಪಿ ಜಿಲ್ಲೆಯಲ್ಲಿ ೧೪ ಕಮಿಟಿಗಳನ್ನು ರಚಿಸಿ ಈ ದೃಷ್ಠಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ ದೀಪ ಪ್ರಜ್ವಲನ ಮಾಡಿದರು. ಪಂಚಾಯತ್ ಉಪಾಧ್ಯಕ್ಷೆ ಸುಗುಣಾ, ಪಂ. ಅಭಿವೃದ್ಧಿ ಅಧಿಕಾರಿ ತಿಲಕ್ರಾಜ್, ಕಾಪು ಎಸ್ಐ ತೇಜಸ್ ಉಡುಪಿ, ಪೊಲೀಸ್ ಅಧಿಕಾರಿ ಹರ್ಷವರ್ದನ್, ಕಟಪಾಡಿ ರೋಟರಿ ಅಧ್ಯಕ್ಷೆ ಆಶಾ ಅಂಚನ್, ಕಟಪಾಡಿ ಲಯನ್ಸ್ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕಟಪಾಡಿ ಜೇಸಿಐ ಅಧ್ಯಕ್ಷೆ ರಂಜಿತಾ ಶೇಟ್, ಉದ್ಯಮಿ ಕೆ. ಸತ್ಯೇಂದ್ರ ಪೈ, ಪಂಚಾಯತ್ ಕಾರ್ಯದರ್ಶಿ ವಿಮಲಾ ಸೇರಿದಂತೆ ಪಂಚಾಯತ್ ಸದಸ್ಯರು, ಸಮಾಜಸೇವಾ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.