ಜೈಲಿನಲ್ಲೇ ಚಿನ್ನಯ್ಯನ ವಿಚಾರಣೆ ನಡೆಸಲಿರುವ ಎಸ್ಐಟಿ
Friday, October 17, 2025
ಮಂಗಳೂರು: ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನಾಗಿ ಬಂದು ಇದೀಗ ಆರೋಪಿಯಾಗಿ ಜೈಲು ಸೇರಿರುವ ಚಿನ್ನಯ್ಯನ ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಬೆಳ್ತಂಗಡಿ ನ್ಯಾಯಾಲಯ ಅನುಮತಿ ನೀಡಿದೆ. ಅದರಂತೆ ಇಂದು ಮತ್ತು ನಾಳೆ ಚಿನ್ನಯ್ಯನ ವಿಚಾರಣೆ ಹಾಗೂ ಹೇಳಿಕೆ ದಾಖಲಿಸುವ ಕಾರ್ಯ ನಡೆಯಲಿದೆ.
ಬಂಗ್ಲೆಗುಡ್ಡೆಯಲ್ಲಿ 10 ಅನಾಥ ಶವಗಳನ್ನು ಹೂತು ಹಾಕಿರುವುದಾಗಿ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್ಗೆ ಹೇಳಿಕೆ ನೀಡಿರುವುದರಿಂದ ಈ ಕುರಿತಂತೆ ಎಸ್ಐಟಿ ತಂಡ ನ್ಯಾಯಾಲಯದ ಅನುಮತಿ ಪಡೆದು ಶಿವಮೊಗ್ಗಕ್ಕೆ ತೆರಳಿ ಜೈಲಿನಲ್ಲಿರುವ ಚಿನ್ನಯ್ಯ ವಿಚಾರಣೆ ನಡೆಸಲಿದೆ.
ಶುಕ್ರವಾರ ಮತ್ತು ಶನಿವಾರ ವಿಚಾರಣೆ ನಡೆಸಲಿದ್ದು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ವೇಳೆ ಚಿನ್ನಯ್ಯ ನೀಡಲಿರುವ ಹೇಳಿಕೆ ಮಹತ್ವ ಪಡೆದುಕೊಳ್ಳಲಿದೆ. ಆ.10 ಶವಗಳು ಯಾರದ್ದು? ಯಾವಾಗ ಹೂತುಹಾಕಿದ್ದು, ಎಲ್ಲಿ ಎಂಬಿತ್ಯಾದಿ ಮಾಹಿತಿಗಳನ್ನು ಎಸ್ಐಟಿ ಚಿನ್ನಯ್ಯನಿಂದ ಪಡೆದುಕೊಳ್ಳಲಿದೆ.