
ವಿದ್ಯುತ್ ದೀಪ ಅಲಂಕಾರದ ವೇಳೆ ವಿದ್ಯುತ್ ಶಾಕ್: ಮೃತ್ಯು
Tuesday, October 21, 2025
ಕಾಸರಗೋಡು: ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಸೀತಾಂಗೋಳಿ ಸಮೀಪದ ಪುತ್ತಿಗೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪುತ್ತಿಗೆ ಆಚಾರಿಮೂಲೆ ನಿವಾಸಿ ರಾಜೇಶ್ ಆಚಾರ್ಯ (37) ಮೃತಪಟ್ಟವರು.
ದೀಪಾವಳಿ ಅಂಗವಾಗಿ ಮನೆಯಂಗಳದಲ್ಲಿ ಅಲಂಕಾರ ವಿದ್ಯುದ್ದೀಪಗಳನ್ನು ಅಳವಡಿಸುತ್ತಿದ್ದಾಗ ರಾಜೇಶ್ ಶಾಕ್ ತಗುಲಿದೆ. ಗಂಭೀರಾವಸ್ಥೆಯಲ್ಲಿದ್ದ ಅವರನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜೇಶ್ ಬಡಗಿ ವೃತ್ತಿ ನಿರ್ವಹಿಸುತ್ತಿದ್ದರು.