 
ಶ್ರೀ ವೈಕುಂಠ ಪ್ರಶಸ್ತಿ ಪ್ರದಾನ-ಕರ್ಮಯೋಗಿ ಐರೋಡಿ ವೈಕುಂಠ ಹೆಬ್ಬಾರ್: ಪ್ರಭಾಕರ ಜೋಷಿ
ಐರೋಡಿ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ನಡೆದ ರಂಗ ನಿರ್ದೇಶಕ ಐರೋಡಿ ವೈಕುಂಠ ಹೆಬ್ಬಾರ್ ಸಂಸ್ಮರಣೆ - ಶ್ರೀ ವೈಕುಂಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಲಾಕೇಂದ್ರದ ಅಧ್ಯಕ್ಷ ಆನಂದ್.ಸಿ.ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ನಾರಾಯಣೀ ದಾಮೋದರ್ ವೈಕುಂಠ ಹೆಬ್ಬಾರರ ಜೀವನ ವೃತ್ತಾಂತವನ್ನು ತಿಳಿಸುತ್ತಾ ಅವರ ಸಂಸ್ಮರಣಾ ಮಾತುಗಳನ್ನಾಡಿದರು.
ಅಂತರಾಷ್ಟ್ರೀಯ ತಬಲಾ ವಾದಕ ಕಲ್ಬಾಗ್ ಗೋಪಾಲಕೃಷ್ಣ ಹೆಗಡೆಯವರಿಗೆ 2025 ರ “ಶ್ರೀ ವೈಕುಂಠ” ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಜಿ.ಕೆ. ಹೆಗಡೆ ಹರಿಕೇರಿಯವರು ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಹೆಬ್ಬಾರ್ ಕುಟುಂಬದವರ ಪರವಾಗಿ ಐರೋಡಿ ನರಸಿಂಹ ಹೆಬ್ಬಾರ್ ಮತ್ತು ಡಾ. ಆದರ್ಶ ಹೆಬ್ಬಾರ್ ಉಪಸ್ಥಿತರಿದ್ದರು.
ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಗುಂಡ್ಮಿ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿ, ಸೀತಾರಾಮ ಸೋಮಯಾಜಿ ವಂದಿಸಿದರು
ಸಭಾ ಕಾರ್ಯಕ್ರಮದ ಪೂರ್ವದಲ್ಲಿ 'ಶಲ್ಯ ಭೇದನ' ಮತ್ತು ಕಾರ್ಯಕ್ರಮದ ನಂತರ 'ಶಲ್ಯ ಪರ್ವ' ಯಕ್ಷಗಾನ ತಾಳಮದ್ದಲೆ ನಡೆಯಿತು.