ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತ ಕೆ.ಪಿ. ಹೆಗಡೆ
1980ರಲ್ಲಿ ಮಂದಾರ್ತಿ ಮೇಳದ ಮೂಲಕ ಯಕ್ಷವೃತ್ತಿಯನ್ನು ಆರಂಭಿಸಿದ ಇವರು ಮುಲ್ಕಿ ಹಿರೇಮಹಾಲಿಂಗೇಶ್ವರ ಕೋಟ, ಶಿರಿಸಿ, ಪಂಚಲಿಂಗೇಶ್ವರ, ಸಾಲಿಗ್ರಾಮ, ಪೆರ್ಡೂರು, ಕುಮಟ, ಕಮಲಶಿಲೆ, ಮಂದಾರ್ತಿ ಮೇಳಗಳಲ್ಲಿ 35ವರ್ಷ ಯಶಸ್ವಿಸೇವೆ ಸಲ್ಲಿಸಿದ್ದಾರೆ ಹಾಗೂ 22 ವರ್ಷ ಹಂಗಾರಕಟ್ಟೆಯಕ್ಷಗಾನ ಕಲಾಕೇಂದ್ರದಲ್ಲಿ ಐದು ವರ್ಷ ಮಂದಾರ್ತಿಯಲ್ಲಿ, ತೆಕ್ಕಟ್ಟೆಯಶಸ್ವಿ ಕಲಾವೃಂದದಲ್ಲಿ ಗುರುಗಳಾಗಿದ್ದಾರೆ. ಇಂದು ಯಕ್ಷರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಯುವ ಕಲಾವಿದರು ಇವರ ಶಿಷ್ಯರಾಗಿದ್ದಾರೆ.
ರಾಮಾಂಜನೇಯ-ಚೂಡಾಮಣಿ, ಭಸ್ಮಾಸುರ ಮೋಹಿನಿ ಮುಂತಾದ ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಗೆ ಜನಮನ್ನಣೆ ಗಳಿಸಿದೆ.
ಪ್ರಸ್ತುತ ಕೋಟ ಹಾಗೂ ಶಿರಸಿ ಸಿದ್ದಾಪುರದ ಗೋಳ್ಗೊಡಿನಲ್ಲಿ ಇವರು ವಾಸವಿದ್ದಾರೆ.
ಪತ್ನಿ, ಲಲಿತಾ ಹೆಗಡೆ, ಪುತ್ರ ವಿನಯ್ ಹಾಗೂ ಪುತ್ರಿ ಸಹನಾಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇವರ ಯಕ್ಷಸೇವೆಯನ್ನು ಗುರುತಿಸಿ ಈ ಹಿಂದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಜತೆಗೆ ಹಲವಾರು ಸಂಘ-ಸಂಸ್ಥೆಗಳ ಗೌರವ ದೊರೆತಿದೆ.
