ಇಂಡಿಯಾ ಮ್ಯಾರಿಟೈಂ ಸಪ್ತಾಹ: ಎನ್ ಎಂಪಿಎ 53 ಸಾವಿರ ಕೋ.ರೂ ಮೌಲ್ಯದ ಒಪ್ಪಂದ ನಿರೀಕ್ಷೆ
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸಂಜೆ ನವಮಂಗಳೂರು ಬಂದರಿನ ಪಾಲುದಾರರೊಂದಿಗೆ ನಡೆಸಿದ ಸಂವಾದಗೋಷ್ಠಿ ವೇಳೆ ಅವರು ಈ ವಿಷಯ ತಿಳಿಸಿದರು.
ಮುಂಬೈನ ಬಾಂಬೆ ಎಕ್ಸಿಬಿಷನ್ ಸೆಂಟರ್‌ನಲ್ಲಿ ಅಕ್ಟೋಬರ್ 27 ರಿಂದ 31 ರ ವರೆಗೆ ಮ್ಯಾರಿಟೈಂ ವೀಕ್ ನಡೆಯಲಿದ್ದು ಜಾಗತಿಕ ನಾಯಕರು, ನಾವೀನ್ಯಕಾರರು ಮತ್ತು ಹೂಡಿಕೆದಾರರು ಸಮುದ್ರ ವ್ಯಾಪಾರ, ಸುಸ್ಥಿರತೆ ಮತ್ತು ಡಿಜಿಟಲ್ ರೂಪಾಂತರದ ಕುರಿತು ಚರ್ಚಿಸಲಿದ್ದಾರೆ. ಐದು ದಿನಗಳ ಈವೆಂಟ್‌ನಲ್ಲಿ ವಿಷಯಾಧಾರಿತ ಅಧಿವೇಶನಗಳು, ಸಿಇಒ ರೌಂಡ್‌ಟೇಬಲ್‌ಗಳು, ತಂತ್ರಜ್ಞಾನ ಪ್ರದರ್ಶನಗಳು ಮತ್ತು ನೆಟ್‌ವರ್ಕಿಂಗ್ ಕಾರ್ಯಕ್ರಮಗಳು ಇರಲಿವೆ. ಎನ್‌ಎಂಪಿಎ ಪ್ಲಾಟಿನಂ ಪ್ರಾಯೋಜಕರಾಗಿ ಭಾಗವಹಿಸುತ್ತಿದೆ ಎಂದರು.
ಕರ್ನಾಟಕದ ಕಡಲ ಸಾಮರ್ಥ್ಯಗಳು, ಸುಸ್ಥಿರ ಬಂದರು ಅಭಿವೃದ್ಧಿ ಮತ್ತು ಹೂಡಿಕೆ ಅವಕಾಶಗಳನ್ನು ಪ್ರದರ್ಶಿಸಲಿದೆ. ಕರ್ನಾಟಕ ರಾಜ್ಯ ಅಧಿವೇಶನದಲ್ಲಿ ’ಸುಸ್ಥಿರ ನೀಲಿ ಆರ್ಥಿಕತೆಗಾಗಿ ಪಿಪಿಪಿ ಸಿನರ್ಜಿಗಳ ಅನ್ವೇಷಣೆ’ ಶೀರ್ಷಿಕೆಯ ಸಂವಾದಗೋಷ್ಠಿಯಲ್ಲಿ ಭಾಗವಹಿಸಲಿದ್ದೇನೆ. ಅಲ್ಲದೆ ಅಕ್ಟೋಬರ್ 30 ರಂದು ಮ್ಯಾರಿಟೈಮ್ ಡಿಜಿಟಲೈಸೇಶನ್ ಮತ್ತು ಫ್ಯೂಚರ್ ಟೆಕ್ ಶೃಂಗಸಭೆಯ ಜಾಗತಿಕ ಸಿಇಒ ರೌಂಡ್‌ಟೇಬಲ್‌ನಲ್ಲಿಮಾತನಾಡಲಿದ್ದೇನೆ. ಇದರಲ್ಲಿ ಹೂಡಿಕೆ ಆದ್ಯತೆಗಳು, ಬಂದರು ಅಭಿವೃದ್ಧಿ, ಹಡಗು ನಿರ್ಮಾಣ ಮತ್ತು ಕ್ರೂಸ್ ಪ್ರವಾಸೋದ್ಯಮದ ಕುರಿತು ಚರ್ಚೆಗಳು ನಡೆಯಲಿವೆ ಎಂದರು.
ಕ್ರೂಸ್ ಮತ್ತು ಪ್ರಯಾಣಿಕರ ಆರ್ಥಿಕತೆ ಕುರಿತು ಜಿಎಂಐಎಸ್ ಅಧಿವೇಶನವನ್ನು ನಿರ್ವಹಿಸಲಿದ್ದೇನೆ. ಈ ಅಧಿವೇಶನದಲ್ಲಿ ಕರಾವಳಿ ಪ್ರಯಾಣದ ನಿರೀಕ್ಷೆಗಳು, ಪ್ರಯಾಣಿಕರ ಟರ್ಮಿನಲ್ ವರ್ಧನೆ, ಡಿಜಿಟಲೀಕರಣ ಮತ್ತು ಹಸಿರು ಪರಿಹಾರಗಳ ಕುರಿತು ಚರ್ಚೆಗಳು ಇರಲಿವೆ ಎಂದರು.
ಕರ್ನಾಟಕದ ಕರಾವಳಿ ಮತ್ತು ವ್ಯಾಪಾರ ಸಂಪರ್ಕಗಳೊಂದಿಗೆ ಭಾರತದ ಸಾಗರ ಬೆಳವಣಿಗೆಗೆ ಎನ್‌ಎಂಪಿಎ ಕೊಡುಗೆ ನೀಡಲಿದೆ. ಉದ್ಯಮದ ಮಧ್ಯಸ್ಥಗಾರರು, ಪ್ರತಿನಿಧಿಗಳು https://imw.org.in/delegates/registration/ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದರು.