ಬಾರ್ಬಡೋಸ್ ಪ್ರಧಾನ ಮಂತ್ರಿಯನ್ನು ಭೇಟಿಯಾದ ಬಸವರಾಜ ಹೊರಟ್ಟಿ, ಯು.ಟಿ. ಖಾದರ್
Friday, October 10, 2025
ಮಂಗಳೂರು: ಬಾರ್ಬಡೋಸ್ ದೇಶದ ಪ್ರಧಾನ ಮಂತ್ರಿ ಮಿಯಾ ‘ಮಾ’ ಅಮೋರ್ ಮೊಟ್ಲಿ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅಂತರರಾಷ್ಟ್ರೀಯ ಸ್ಪೀಕರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲು ಬಾರ್ಬಡೋಸ್‌ಗೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಗಣ್ಯರು ಪರಸ್ಪರ ಸ್ನೇಹಪೂರ್ಣ ಶುಭಾಶಯಗಳನ್ನು ಸಲ್ಲಿಸಿ, ವಿಚಾರ ವಿನಿಮಯ ಮಾಡಿಕೊಂಡರು ಹಾಗೂ ಬಾರ್ಬಡೋಸ್ ಪ್ರಧಾನಿಯನ್ನು ಕರ್ನಾಟಕಕ್ಕೆ ಆಹ್ವಾನಿಸಿದರು.