ನೋಟೀಸು ನೀಡದೆ ಶರಣ್ ಪಂಪುವೆಲ್ ಅವರನ್ನು ಪೊಲೀಸ್ ವಶಕ್ಕೆ ಪಡೆದಿರುವುದು ಖಂಡನೀಯ: ವಿಶ್ವ ಹಿಂದೂ ಪರಿಷದ್ ಬಜರಂಗದಳ

ನೋಟೀಸು ನೀಡದೆ ಶರಣ್ ಪಂಪುವೆಲ್ ಅವರನ್ನು ಪೊಲೀಸ್ ವಶಕ್ಕೆ ಪಡೆದಿರುವುದು ಖಂಡನೀಯ: ವಿಶ್ವ ಹಿಂದೂ ಪರಿಷದ್ ಬಜರಂಗದಳ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿರುವ ಹಿನ್ನೆಲೆಯಲ್ಲಿ ನೋಟೀಸು ನೀಡದೆ ಶರಣ್ ಪಂಪುವೆಲ್ ಅವರನ್ನು ಪೊಲೀಸ್ ವಶಕ್ಕೆ ಪಡೆದಿರುವುದು ಖಂಡನೀಯ.

ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಸುಳ್ಳು ಕೇಸುಗಳನ್ನು ಹಾಕಿ ಹಿಂದೂ ಮುಖಂಡರನ್ನು ಧಮನಿಸುವ ಕೆಲಸ ಮಾಡುತ್ತಿದೆ. ಯಾವುದೇ ನೋಟೀಸು ನೀಡದೆ ಏಕಾಏಕಿಯಾಗಿ ಶರಣ್ ಪಂಪುವೆಲ್ ರವರನ್ನು ಬಂದಿಸಿರುವುದು ಕಾನೂನಿಗೆ ವಿರುದ್ಧವಾಗಿದೆ ಅಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಈ ಹಿಂದೂ ವಿರೋಧಿ ಸರಕಾರದ ನಡೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ವಿಭಾಗ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ್ ಹಾಗೂ ವಿಭಾಗ ಬಜರಂಗದಳ ಸಂಯೋಜಕ್ ಪುನೀತ್ ಅತ್ತಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article