ದೀಪಾವಳಿಗೆ ವಿಶೇಷ ರೈಲು

ದೀಪಾವಳಿಗೆ ವಿಶೇಷ ರೈಲು


ಮಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ಊರಿಗೆ ಬರುವ ನಿರೀಕ್ಷೆಯ ಹಿನ್ನೆಲೆ, ಹುಬ್ಬಳ್ಳಿ  - ಬೆಂಗಳೂರು - ಮಂಗಳೂರು ಮಾರ್ಗದಲ್ಲಿ ಮೂರು ವಿಶೇಷ ರೈಲುಗಳು ಸಂಚರಿಸಲಿವೆ.

ಶ್ರೀ ಸಿದ್ಧಾರೂಡ ಸ್ವಾಮೀಜಿ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 07353, ಅ.17 ರಂದು ಸಂಜೆ 4ಕ್ಕೆ ಹುಬ್ಬಳ್ಳಿ ಜಂಕ್ಷನ್‌ನಿಂದ ಹೊರಟು ರಾತ್ರಿ 11.25ಕ್ಕೆ ಬೆಂಗಳೂರಿಗೆ (ಯಶವಂತಪುರ) ತಲುಪಲಿದೆ. 18 ರಂದು ಬೆಳಗ್ಗೆ 11.15ಕ್ಕೆ ಮಂಗಳೂರಿಗೆ ತಲುಪಲಿದೆ.

ವಾಪಸ್ಸು ಪ್ರಯಾಣ: 

ರೈಲು ಸಂಖ್ಯೆ 07354, ಅ.18 ರಂದು ಮಧ್ಯಾಹ್ನ 2.35ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ರಾತ್ರಿ 11.25ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 06229, ಅ.19 ರಂದು ಬೆಂಗಳೂರಿನಿಂದ ರಾತ್ರಿ 12.15ಕ್ಕೆ ಹೊರಟು ಬೆಳಗ್ಗೆ 11.15ಕ್ಕೆ ಮಂಗಳೂರು ತಲುಪಲಿದೆ.

ಮಂಗಳೂರು-ಬೆಂಗಳೂರು ಕಂಟೋನ್ಮೆಂಟ್ ರೈಲು ಸಂಖ್ಯೆ 06230 ಅ.19 ರಂದು ಮಧ್ಯಾಹ್ನ 2.35ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 12.30ಕ್ಕೆ ಬೆಂಗಳೂರು ತಲುಪಲಿದೆ.

ನಿಲುಗಡೆ ಸೌಲಭ್ಯ ಇರುವ ಪ್ರಮುಖ ನಿಲ್ದಾಣಗಳು..

ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ, ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ, ಹಾವೇರಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article