ವಿವಿ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಸಭೆ
ಇದೇ ವೇಳೆ 2025-26ನೇ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಕಾರ್ಯಾಧ್ಯಕ್ಷರಾಗಿ ಜೀವನ್ ಪೂಜಾರಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಯಶ್ರೀ ಹಿರೇಮಠ, ವೀಣಾ ಹಾಗೂ ಸುಜಾತ ದೇವಾಡಿಗ ಆಯ್ಕೆಯಾದರು. ಉಪಕಾರ್ಯದರ್ಶಿಯಾಗಿ ಸಂಧ್ಯಾ ಕೆ., ಸದಸ್ಯರಾಗಿ ವಿಜಯ್ ಕುಮಾರ್, ಸುಗುಣ ಎಚ್. ಕೋಟ್ಯಾನ್, ಸದಾಶಿವ ಬಿ.ಎನ್., ಓಬಯ್ಯ ಕಜೇಕಾರ್, ಮರಿಯಾ ಜ್ಯೋತಿ ಪಿಂಟೋ, ಮೀನಾ ಇವರುಗಳು ಆಯ್ಕೆಯಾದರು.
ನೂತನ ಕಾರ್ಯಾಧ್ಯಕ್ಷ ಜೀವನ್ ಪೂಜಾರಿ, ವಿದ್ಯಾರ್ಥಿಗಳ ಸವಾಂಗೀಣ ಬೆಳವಣಿಗೆಗೆ ಕೇವಲ ಶಿಕ್ಷಕರು ಮಾತ್ರವಲ್ಲದೇ, ರಕ್ಷಕರು ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಕಾಲೇಜಿನ ಅಭಿವೃದ್ಧಿಗೆ ರಕ್ಷಕರಾಗಿ ನಾವೆಲ್ಲರೂ ಕೈ ಜೋಡಿಸಲು ಬದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲೂ ಉತ್ತಮ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಿಕ್ಷಕ-ರಕ್ಷಕ ಸಂಘದ ಮಾಜಿ ಕಾರ್ಯಾಧ್ಯಕ್ಷ ದೀಪಕ್ ಗಿಲ್ಬರ್ಟ್ ಡಿಸೋಜಾ, ಶಿಕ್ಷಕ ಮತ್ತು ರಕ್ಷಕರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದೇ ಆದಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ರಕ್ಷಕರ ವತಿಯಿಂದಲೂ ಉತ್ತಮ ಸಹಕಾರ ನಿರೀಕ್ಷೆ ಮಾಡುತ್ತೇವೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್ಗಳ ದಾಸರಾಗುತ್ತಿದ್ದಾರೆ. ಅದನ್ನು ತಪ್ಪಿಸಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜಿನಲ್ಲಿ ಒಂದಷ್ಟು ನೀತಿ-ನಿಯಮಗಳನ್ನು ರೂಪಿಸುವ ಅಗತ್ಯವಿರುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಹಿತರಕ್ಷಣೆ ದೃಷ್ಟಿಯಿಂದ ರಕ್ಷಕರೂ ಸಹಕಾರ ನೀಡಬೇಕಿದೆ ಎಂದು ಮನವರಿಕೆ ಮಾಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಪೋಷಕರು ಉಪಸ್ಥಿತರಿದ್ದರು.