ದೈವಾರಾಧನೆ ಬಗ್ಗೆ ತುಳುನಾಡಿನಲ್ಲಿ ಗಾಢವಾದ ನಂಬಿಕೆಯಿದೆ: ಅಜಿತ್ ಕುಮಾರ್ ರೈ ಮಾಲಾಡಿ

ದೈವಾರಾಧನೆ ಬಗ್ಗೆ ತುಳುನಾಡಿನಲ್ಲಿ ಗಾಢವಾದ ನಂಬಿಕೆಯಿದೆ: ಅಜಿತ್ ಕುಮಾರ್ ರೈ ಮಾಲಾಡಿ


ಮಂಗಳೂರು: ದೈವಾರಾಧನೆ ಬಗ್ಗೆ ತುಳುನಾಡಿನಲ್ಲಿ ಗಾಢವಾದ ನಂಬಿಕೆಯಿದೆ. ಇದಕ್ಕೆ ಯಾವತ್ತೂ ಅಪಚಾರವಾಗಬಾರದು. ದೈವ ದೇವರ ಬಗ್ಗೆ ಅ ಪಹಾಸ್ಯ ಯಾರೂ ಮಾಡಬಾರದು ಹಾಗೂ ಜನರ ನಂಬಿಕೆಗೆ ಧಕ್ಕೆ ಆಗದಂತೆ ಹಾಗೂ ಅಪನಂಬಿಕೆ ಮೂಡಿಸುವ ಕಾರ್ಯವನ್ನೂ ಯಾರೂ ಮಾಡಬಾರದು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.

ಉರ್ವಸ್ಟೋರ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿರವಿವಾರ ನಡೆದ ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಮಂಗಳೂರು ಇದರ ಉದ್ಘಾಟನೆ  ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂತಾರ ಸಿನೆಮಾದಿಂದ ದೈವಕ್ಕೆ ನಿಂದನೆ ಆದ ಹಾಗಿಲ್ಲ. ತಿಳುವಳಿಕೆ ಇಲ್ಲದವರ ವರ್ತನೆಯಿಂದ ಆ ಬಳಿಕ ಭಕ್ತರ ಮನಸಿಗೆ ನೋವಾಗಿದೆ. ನಾವು ನಂಬಿದ ದೈವಕ್ಕೆ ಏ ನೂ ಆಗುವುದಿಲ್ಲ. ಆದರೆ ದೈವವನ್ನು ನಂಬಿದ ಭಕ್ತರಿಗೆ ನೋವಾಗುತ್ತದೆ ಎಂದು ಹೇಳಿದ ಅವರು ಕಾಂತಾರ ಬಂದ ಬಳಿಕ ತುಳುನಾಡಿನ ದೈವ ದೇವರ ಬಗ್ಗೆ ಯುವಜ ನರಿಗೆ ಆಸಕ್ತಿ, ಕುತೂಹಲ ಅಧಿಕವಾಗಿದೆ. ಉತ್ತೇಜನ ದೊರಕಿದೆ. ದೈವದ ಬಗ್ಗೆ ನಂಬಿಕೆಯೂ ಇಮ್ಮಡಿಯಾಗುತ್ತಿದೆ ಎಂದರು.

ಪ್ರಸಕ್ತ ದಿನದಲ್ಲಿ ಮಕ್ಕಳಿಗೆ ದೈವ ದೇವರ ಬಗ್ಗೆ ವಿವರವೇ ಗೊತ್ತಿಲ್ಲದ ಸ್ಥಿತಿ ಇದೆ. ವಿದ್ಯಾಭ್ಯಾಸ, ಉದ್ಯೋಗದ ಕಾರಣದಿಂದ ದೈವದ ಕಾರ್ಯ ನಡೆಸಲು ಜನ ಇಲ್ಲ ಎಂಬ ಕೊರಗು ಕೆಲವೆಡೆ ಕಾಡುತ್ತಿದೆ. ವಿದ್ಯೆ, ಉದ್ಯೋಗ ಅಗತ್ಯವಾದರೂ ಈ ಮಣ್ಣಿನ ಶಕ್ತಿ ದೈವಾರಾಧನೆ ಬಗ್ಗೆ ಸಮತೋಲನ ನೆಲೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.

ತುಳುನಾಡ ದೈವ ಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀನಾರಾಯಣ ಎಂ. (ಅಣ್ಣು ಪೂಜಾರಿ) ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಿ.ವೇದವ್ಯಾಸ ಕಾಮತ್, ಉದ್ಯಮಿ ಲಾಂಚುಲಾಲ್ ಕೆ.ಎಸ್., ಜ್ಯೋತಿಷ್ಯ ಪ್ರಕಾಶ್ ವಿ. ಹೊಳ್ಳ, ಬ್ರಹ್ಮಶ್ರೀ ನಾರಾಯಣಗುರು ವೈದಿಕ ಸಮಿತಿಯ ಹರೀಶ್ ಶಾಂತಿ ಪುತ್ತೂರು, ಕುಳಾಯಿ ಗುತ್ತು  ಗಡಿಕಾರ ಪಟೇಲ್ ಶಂಕರ್ ರೈ, ಪಂಬದ ಯಾನೆ ದೈವಾಧಿಗಾರ ಸಂಘ ಗಂಧಕಾಡು ಅಧ್ಯಕ್ಷ ಪುರುಷೋತ್ತಮ ಗೋಳಿಪಲ್ಕೆ, ಪ್ರಮುಖರಾದಕೃಷ್ಣ ಅಡಿಗ, ಪಮ್ಮಿ ಕೊಡಿಯಾಲ್ ಬೈಲ್, ಬಿ.ಕೆ. ಬೂಬ ಪೂಜಾರಿ ಮಲರಾಯಸ್ಥಾನ ಮುಂತಾದವರು ಉಪಸ್ಥಿತರಿದ್ದರು. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯರಿಗೆ ಆರೋಗ್ಯ ವಿಮೆ ಮಾಡಲಾಯಿತು.

ಟ್ರಸ್ಟ್ ಉಪಾಧ್ಯಕ್ಷ ವಿಜಯ್ ಚೌಟ ಚಾವಡಿದಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಶ್ರುತನ್ ವಿ.ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ದೀಪಕ್ ಅಡ್ಯಾರ್ ನಿರೂಪಿಸಿದರು.

‘ನಂಬಿಕೆಗೆ ಧಕ್ಕೆ ಆಗಬಾರದು‘

ತೊಕ್ಕೊಟ್ಟು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಡಾ| ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಿದರು. ಕಾಂತಾರ ಬಂದ ಬಳಿಕ ದೈವಾರಾಧನೆ ಕುರಿತ ಚರ್ಚೆಯ ಕಾರಣದಿಂದಾಗಿ ಟ್ರಸ್ಟ್ ಆಯಿತು ಎಂಬುದು ಕೆಲವರ ಅನಿಸಿಕೆ ಇದೆ. ಆದರೆ ಅದಕ್ಕೆ ಸಂಬಂಧವೇ ಇಲ್ಲ. ಟ್ರಸ್ಟ್ ರಚನೆ ಹಾಗೂ ಈ ಕಾರ್ಯಕ್ರಮವು ಸಿನೆಮಾ  ಬರುವ ಮುನ್ನವೇ ನಿಗದಿಯಾಗಿತ್ತು ಎಂದು ಹೇಳಿದ ಅವರು, ದೈವಾರಾಧನೆ ವಿಷಯದಲ್ಲಿ ಪ್ರಸಕ್ತ ವಿಮರ್ಶೆಯ ಕಣ್ಣುಗಳು ವಿವಿಧ ಕಡೆಗಳಲ್ಲಿ ಇರುವುದರಿಂದ ಹೆಚ್ಚು  ಜಾಗೃತೆ ಹಾಗೂ ನಿಷ್ಠೆ ಅತೀ ಅಗತ್ಯ. ಭಕ್ತರ ನಂಬಿಕೆಗೆ ಯಾವುದೇ ಕಾಲದಲ್ಲಿ ಧಕ್ಕೆ ಆಗದಂತೆ, ಲೋಕವು ವಿಶ್ವಾಸದಿಂದ ನೋಡುವಂತೆ ಈ ಸೇವೆಯಲ್ಲಿ ದೈವ ಪರಿಚಾರಕರು ಮುನ್ನಡೆಯುವ ಸವಾಲು ಇದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article