ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮ
ಯೆನಪೊಯ ನೇಚುರೋಪತಿ ಮತ್ತು ಯೋಗಿಕ್ ಸೈನ್ಸ್ ಮತ್ತು ಕಾಲೇಜು ಮತ್ತು ಆಸ್ಪತ್ರೆ ಆಸೀಸ್ಟಂಟ್ ಪ್ರೊಫೆಸರ್ ಡಾ. ಪದ್ಮಶ್ರೀ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ್ ಬಾಳ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ಕಾಲೇಜಿನ ಕ್ಷೇಮಪಾಲನ ಅಧಿಕಾರಿ ಡಾ. ಜಯಶ್ರೀ ಕೆ. ಐಕ್ಯೂಎಸಿ ಸಂಯೋಜಕಿ ಡಾ. ಮಂಜುಳಾ ಮಲ್ಯ, ವುಮನ್ ಸೆಲ್ ಕಾರ್ಡಿನೇಟರ್ ಶಿಲ್ಪಾ ಬಿ.ಎಸ್., ಎನ್.ಎಸ್.ಎಸ್. ಸಂಯೋಜಕಿಗಳಾದ ಡಾ. ಸುಮನಾ ಬಿ. ಮತ್ತು ಡಾ. ಮೀನಾಕ್ಷಿ ಆಚಾರ್ಯ, ರೆಡ್‌ಕ್ರಾಸ್ ಸಂಯೋಜಕಿ ಡಾ. ಗೋಪಾಲಕೃಷ್ಣ ಕೆ., ರೇಂಜರ್ಸ್ ಸಂಯೋಜಕ ತಿಜಾ ಥಾಮಸ್, ಜಗನ್ನಾಥ್ ಶೆಟ್ಟಿ, ಸಂತೋಷ್ ಶೆಟ್ಟಿ ಹಾಗೂ ಇತರ ವಿದ್ಯಾರ್ಥಿ ಮುಖಂಡರು ಉಪಸ್ಥಿತರಿದ್ದರು.
ಮಾನವೀಯತೆ ಮೆರೆದ ಕಾಲೇಜಿನ ಶಿಕ್ಷಕರು ಹಿಂದು ಪಿಯು ಕಾಲೇಜು ಶಿರ್ವ ಹಾಗೂ ಜ್ಞಾನಚೇತನಾ ಎಜುಕೇಶನ್ ಟ್ರಸ್ಟ್‌ನ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಯ ತಾಯಿಯ ಕ್ಯಾನ್ಸರ್ ಚಿಕಿತ್ಸೆಗಾಗಿ 26,101 ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಶಾಲಾ ಹಳೆ ವಿದ್ಯಾರ್ಥಿ ಪವನ್ ಕುಮಾರ್ ಶಿರ್ವ ಅವರ ಮನೆಗೆ ತೆರಳಿ ಅವರಿಗೆ ಹಸ್ತಾಂತರಿಸಿದರು.