ಮಹಿಳೆಯರಿಗೆ ಉಚಿತ ಕಾನೂನು ಸೇವೆ ತರಬೇತಿ
Saturday, October 11, 2025
ಮಂಗಳೂರು: ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ಬೆಂಗಳೂರು ಕ್ರಾಸ್ ಸಂಸ್ಥೆ ಮತ್ತು ಮಂಗಳೂರು ಸಿಒಡಿಪಿ ಸಂಸ್ಥೆಗಳ ಸಹಯೋಗದೊಂದಿಗೆ ಮಹಿಳೆಯರಿಗೆ ಉಚಿತ ಕಾನೂನು ಸೇವೆಯ ಕುರಿತು ಎರಡು ದಿನಗಳ ಮಾಹಿತಿ ಕಾರ್ಯಗಾರ ಅ.9ರಂದು ನಡೆಯಿತು.
ಸಂಸ್ಥೆಯ ಸಹ ನಿರ್ದೇಶಕ ಫಾ. ಲಾರೆನ್ಸ್ ಕುಟಿನ್ಹೋ ಉದ್ಘಾಟಿಸಿದರು. ಸಮೃದ್ಧಿ ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಮುಖ್ಯ ಅತಿಥಿಯಾಗಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಹರ್ಶಿತಾ ಎಂ. ವಿ., ಸವಿತಾ, ಅಶ್ವಿನಿ, ಪ್ರಿಯಾ ಮಾಹಿತಿ ನೀಡಿದರು. ವಿವಿಧ ಧರ್ಮ ಪ್ರಾಂತ್ಯಗಳಾದ ಉಡುಪಿ, ಪುತ್ತೂರು, ಬೆಳ್ತಂಗಡಿಯಿಂದ 50 ಮಂದಿ ಮಹಿಳೆಯರು ಭಾಗವಹಿಸಿದರು.
ಮಹಿಳಾ ಸಬಲೀಕರಣ ಯೋಜನೆಯ ಸಂಯೋಜಕಿ ಸುಪ್ರಿಯಾ ನಿರೂಪಿಸಿ, ಕಾರ್ಯಕರ್ತೆ ವಾಣಿಯವರು ಸ್ವಾಗತಿಸಿ ಕಾರ್ಯಕರ್ತ ಆಂಥೋನಿ ವಂದಿಸಿದರು.