ಸಾಮಾಜಿಕ ಪ್ರಭಾವ ಪ್ರಶಸ್ತಿ
Thursday, October 30, 2025
ಮಂಗಳೂರು: ಎನ್.ಜಿ.ಒ ದಿ ಅಸೋಸಿಯೇಷನ್ ಅಂಗವಿಕಲರಿಗೆ ಬ್ರಿಡ್ಜ್‌ಸ್ಟೋನ್ ಮೊಬಿಲಿಟಿ ಸಾಮಾಜಿಕ ಪ್ರಭಾವ ಪ್ರಶಸ್ತಿಗಳು ೫ನೇ ಆವೃತ್ತಿಯ ವಿಜೇತರಲ್ಲಿ ಒಂದಾಗಿದೆ. ಎಪಿಡಿ ಈ ಪುರಸ್ಕಾರವನ್ನು ‘ದುರ್ಬಲ ಸಮುದಾಯಗಳ ಸಬಲೀಕರಣ’ ವಿಭಾಗದ ಅಡಿಯಲ್ಲಿ ಪಡೆದಿದ್ದು ’ಚಕ್ರಗಳ ಮೇಲೆ ಪುನರ್ವಸತಿ’ ಎಂಬ ಪರಿಣಾಮಕಾರಿ ಉಪಕ್ರಮಕ್ಕೆ ಪಡೆದಿದ್ದು, ವಿಶೇಷ ಚೇತನರು ಮತ್ತು ದುರ್ಬಲ ಸಮುದಾಯದವರಿಗೆ ಸಮಗ್ರ ಪುನರ್ ವಸತಿ ಸೇವೆಗಳನ್ನು ಮನೆ ಬಾಗಿಲಿಗೆ ತರುತ್ತಿದೆ. ಇದು ತನ್ನ ಎಲ್ಲರನ್ನೂ ಒಳಗೊಳ್ಳುವ ಕಾರ್ಯಕ್ರಮ ಮತ್ತು ವಕ್ತಾರಿಕೆಯಿಂದ 1 ಮಿಲಿಯನ್ ಮೀರಿ ಜನರಿಗೆ ಪರಿಣಾಮ ಬೀರಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀಹಿರೊಶಿ ಯೊಶೀಝಾನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.