‘ಹೊಣೆಗಾರಿಕೆಯ ನಿರ್ವಹಣೆ ಮಹತ್ವದ್ದು’: ಸಂತೋಷ್ ಹೆಗ್ಡೆ

‘ಹೊಣೆಗಾರಿಕೆಯ ನಿರ್ವಹಣೆ ಮಹತ್ವದ್ದು’: ಸಂತೋಷ್ ಹೆಗ್ಡೆ


ಮಂಗಳೂರು: ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಆಡಳಿತದಲ್ಲಿ ಮತ್ತು ದೈನಂದಿನ ಜೀವನದಲ್ಲಿ ನೈತಿಕತೆ, ಸಾಮಾಜಿಕ ಹೊಣೆಗಾರಿಕೆಯ ನಿರ್ವಹಣೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು. 

ನಗರದ ಸ್ಕೂಲ್ ಆಫ್ ಸೋಷಿಯಲ್ ವರ್ಕ್ಸ್ ರೋಶನಿ ನಿಲಯದಲ್ಲಿ ಗುರುವಾರ ನಡೆದ  ‘ಸ್ಪಂದನ 2025’ ವಯಸ್ಸಾಗುವಿಕೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರ ಹಾಗೂ ಸಂಪತ್ತು ನ್ಯಾಯ ಮಾರ್ಗದ ದಿಕ್ಕನ್ನು ತಪ್ಪಿಸಬಹುದು. ಯುವ ಜನರು ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಪ್ರಾಮಾಣಿಕತೆ, ವಿನಯ, ಮಾನವೀಯತೆಯ ಗುಣ ಬೆಳೆಸಿಕೊಳ್ಳಬೇಕು. ನೈತಿಕತೆ ಬದುಕಿನ ಭಾಗವಾಗಬೇಕು. ಅರ್ಥಪೂರ್ಣ ಕೊಡುಗೆಯಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂಬುದನ್ನು ಯುವಜನರು ಅರಿಯಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ಲೂಯಿಸ್ ಮೆಂಡೋನ್ಸಾ ಮೆಮೋರಿಯಲ್ ಟ್ರಸ್ಟ್‌ನ ಸಾರ್ವಜನಿಕ ಆರೋಗ್ಯ ಸಲಹೆಗಾರ ಲಿಯೊನಾರ್ಡೊ ಮಚಾದೊ, ಸಂಶೋಧಕ ಸಂಶೋಧನೆಗಳು ನೀತಿಯಲ್ಲಿ ಅಳವಡಿಕೆಯಾಗಿ ಪ್ರಾಯೋಗಿಕವಾಗಿ ಅನುಷ್ಠಾನಗೊಂಡಾಗ ಸಮಾಜದ ಎಲ್ಲ ವರ್ಗದವರಿಗೆ ಇದರ ಪ್ರಯೋಜನ ದೊರೆಯುತ್ತದೆ ಎಂದರು.

ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಮೀನಾ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು.

ಸಂಶೋಧನಾ ಡೀನ್ ಸೆಬಾಸ್ಟಿನ್ ಕೆ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಅನುರಾಧಾ ಸ್ವಾಗತಿಸಿದರು. ಭರತ್ ವಂದಿಸಿದರು. ಶರೋನ್ ಡಯಾಜ್ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article