ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ: ಕ್ರಮಕ್ಕೆ ಆಗ್ರಹ
ಮಂಗಳೂರು: ನಮ್ಮ ದೇಶದ ನಂಬರ್‌ಒನ್ ಸಂಘಟನೆಯಾದ ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಹಿಯಾಳಿಸಿ ಮಾತನಾಡಿರುವ ಸಚಿವ ಪ್ರಿಯಾಂಕ ಖರ್ಗೆಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ, ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ರವಿ ಕುಮಾರ್ ಆಗ್ರಹಿಸಿದರು.
ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಆರ್‌ಎಸ್‌ಎಸ್ ಬಗ್ಗೆ ನಾಲ್ಕು ಅಕ್ಷರದ ಜ್ಞಾನ ಕೂಡ ಖರ್ಗೆಗೆ ಇಲ್ಲ. ಆರ್‌ಎಸ್‌ಎಸ್ ಬಗ್ಗೆ ಅಜ್ಞಾನ, ಅಂದಕಾರದಲ್ಲಿದ್ದಾರೆ. ಆರ್‌ಎಸ್‌ಎಸ್ ಕಾರ್ಯಗಾರಕ್ಕೆ ಅವರೂ ಬರಲಿ ಅವರ ಅಪ್ಪನನ್ನೂ ಕರೆದುಕೊಂಡು ಬಂದು ನೋಡಲಿ ಎಂದು ಹೇಳಿದರು.
ಆರ್‌ಎಸ್‌ಎಸ್ ಕಳೆದ 100 ವರ್ಷಗಳಿಂದ ಅನೇಕ ಸಾಮಾಜಿಕ ಚಟುವಟಿಗೆಗಳು, ತುರ್ತು ಸಂದರ್ಭದಲ್ಲಿ, ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಮೊದಲು ನಿಂತು ನಿಸ್ವಾರ್ಥ ಮನೋಭಾವನೆಯಿಂದ ಕೆಲಸ ಮಾಡಿದೆ. ಆರ್‌ಎಸ್‌ಎಸ್ ಸಾಮಾನ್ಯ ಸಂಘಟನೆಯಲ್ಲ ಇದು ದೇಶಕ್ಕೆ ಅಟಲ್ ಬಿಹಾರಿ ವಾಜಿಪಾಯಿ ಹಾಗೂ ನರೇಂದ್ರ ಮೋದಿಯಂತಹ ಶ್ರೇಷ್ಠ ಇಬ್ಬರು ಪ್ರದಾನ ಮಂತ್ರಿಗಳನ್ನು ಆರ್‌ಎಸ್‌ಎಸ್ ನೀಡಿದೆ ಎಂದರು.
ಪ್ರಿಯಾಂಕ ಖರ್ಗೆ ಅವೈಜ್ಞಾನದಿಂದ ಅಂದಕಾರ ತುಂಬಿದ್ದು, ಅಧಿಕಾರದ ಅಹಾಂಕಾರ ನೆತ್ತಿಗೆ ಏರಿ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಎಸ್‌ಡಿಪಿಐ ಬಗ್ಗೆ ಕ್ರಮ ಕೈಗೊಳ್ಳಲಿ. ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಿ, ಡಿಜೆ-ಕೆಜಿ ಹಳ್ಳಿಯಲ್ಲಿ ಶಾಸಕ ಅಖಾಂಡ ಶ್ರೀನಿವಾಸರ ಮನೆಯ ಮೇಲೆ ದಾಳಿ ಮಾಡದವರ ವಿದುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಟಿಪ್ಪು ಜಯಂತಿ ಆಚರಿಸಿ ಕತ್ತಿ ಹಿಡಿದು ರಸ್ತೆ ತಿರುಗುವಾಗ ಯಾವ ಸಮಸ್ಯೆಯೂ ಆಗುವುದಿಲ್ಲ. ಅದೇ ಆರ್‌ಎಸ್‌ಎಸ್‌ನವರು ಧಂಡ ಹಿಡಿದು ತಿರುಗಿದಾಗ ಭಯ ಆಗುತ್ತದೆ ಎಂದು ಹೇಳುತ್ತಾರೆ ಎಂದು ಹೇಳುವ ಅವರು ಜೈಲಿನಲ್ಲಿರುವ ಭಯೋತ್ಪಾದಕರಿಗೆ ಬಿರಿಯಾನಿ ನೀಡುತ್ತಿರುವುದು ಯಾರು? ಕುಕ್ಕರ್ ಬಾಂಬ್ ಹಾಕಿದವರನ್ನು ಬ್ರದರ‍್ಸ್ ಎಂದು ಹೇಳಿದವರು ಯಾರು ಎಂದು ಪ್ರಶ್ನಿಸಿದರು.
ಆರ್‌ಎಸ್‌ಎಸ್ ಬಗ್ಗೆ ಇಂದಿರಾ ಗಾಂಧಿ, ನೆಹರು ಏನು ಹೇಳಿದ್ದಾರೆ. ಅಂಬೇಡ್ಕರ್, ಗಾಂಧೀಜಿ ಕಾರ್ಯಗಾರಕ್ಕೆ ಭೇಟಿ ಮಾಡಿ ಏನು ಅಧ್ಯಾಯನ ಮಾಡಿದ್ದಾರೆ ಎಂದು ತಿಳಿದುಕೊಳ್ಳಲಿ. ಕಾಂಗ್ರೆಸ್‌ನವರಿಗೆ ಬೇಕಾದರೆ ಆರ್‌ಎಸ್‌ಎಸ್ ಪುಸ್ತಕಗಳನ್ನು ನಾನು ಸಪ್ಲೇ ಮಾಡುತ್ತೇನೆ. ಇಲ್ಲಿ ಆರ್‌ಎಸ್‌ಎಸ್ ಬಗ್ಗೆ ದೂರುವ ಮನೆಯವರೇ ಕಾರ್ಯಗಾರಕ್ಕೆ ಬರುತ್ತಾರೆ. ಅವರ ಮನೆಯ ಹೆಗಸರು ಹಾಗೂ ಅಣ್ಣ ತಮ್ಮಂದಿರು ಹಣ ನೀಡಿ ಪೋಷಿಸುತ್ತಿದ್ದಾರೆ ಎಂದು ಹೇಳಿದರು.
ಯುವ ಜನತೆಯ ಚಾರಿತ್ರ್ಯವನ್ನು ನಿರ್ಮಾಣ ಮಾಡುವ ಸಂಘಟನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ವಿದ್ಯಾರ್ಥಿ-ಯುವ ಜನತೆಯಲ್ಲಿ ದೇಶಪ್ರೇಮ ಬಿತ್ತುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ರಾಜ್ಯದಲ್ಲಿ ಬೈಠೆಕ್ ನಡೆಸಲು ಪ್ರಿಯಾಂಕ ಖರ್ಗೆಯವರು ಯಾವ ಊರ ದೊಣ್ಣೆ ನಾಯಕ ಎಂದು ಪ್ರಶ್ನಿಸಿದರು.
ಹರಿಪ್ರಸಾದ್ ಎಷ್ಟೇ ಮಾತನಾಡಿದರೂ ಮಿನಿಷ್ಟರ್ ಸ್ಥಾನ ಸಿಗುವುದಿಲ್ಲ:
ಬಿ.ಕೆ. ಹರಿಪ್ರಸಾದ್ ಅವರು ಆರ್‌ಎಸ್‌ಎಸ್ ಬಗ್ಗೆ ಎಷ್ಟೇ ಮಾತನಾಡಿದರೂ ಅವರನ್ನು ಮಿನಿಷ್ಟರ್ ಸ್ಥಾನ ಸಿಗುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಪ್ರತಪ್‌ಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಪ್ರೇಮನಾಥ ಶೆಟ್ಟಿ, ರವಿಂದ್ರ ಶೆಟ್ಟಿ ಉಳಿದೊಟ್ಟು, ಸುನಿಲ್ ಆಳ್ವ, ಪೂಜಾ ಪೈ, ಶಾಂತಿ ಪ್ರಕಾಶ್, ಪೂರ್ಣಿಮಾ, ಸಂಜಯ್ ಪ್ರಭು, ದಯಾನಂದ ಶೆಟ್ಟಿ, ದಿನೇಶ್ ಪುತ್ರನ್ ಉಪಸ್ಥಿತರಿದ್ದರು.