ಮಂಗಳೂರು ತಲುಪಿದ ಎಸ್.ಎಫ್.ಐ. ಶೈಕ್ಷಣಿಕ ಜಾಥಾ: ವಿದ್ಯಾರ್ಥಿಗಳಿಂದ ಸ್ವಾಗತ

ಮಂಗಳೂರು ತಲುಪಿದ ಎಸ್.ಎಫ್.ಐ. ಶೈಕ್ಷಣಿಕ ಜಾಥಾ: ವಿದ್ಯಾರ್ಥಿಗಳಿಂದ ಸ್ವಾಗತ


ಮಂಗಳೂರು: ಭಾರತ ವಿದ್ಯಾರ್ಥಿ ಫೇಡರೇಷನ್ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಮತ್ತು ಹಾಸ್ಟೆಲ್ ಬಲವರ್ಧನೆಗಾಗಿ ಎಂಬ ಧ್ಯೇಯದೊಂದಿಗೆ ಅಕ್ಟೋಬರ್ 13ರಂದು ಧಾರವಾಢ ದಿಂದ ಆರಂಭಗೊಂಡ ರಾಜ್ಯ ಮಟ್ಟದ ಜಾಥಾ ಇಂದು ಮಂಗಳೂರು ತಲುಪಿತು. ಮಂಗಳೂರಿನ ಕ್ಲಾಕ್ ಟವರ್ ಬಳಿ ಜಾಥಾ ತಂಡವನ್ನು ಸ್ವಾಗತಿಸಲಾಯಿತು.


ನಂತರ ಜಾಥಾ ಉದ್ದೇಶಿಸಿ ಪ್ರಾಸ್ತವಿಕವಾಗಿ SFI ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಅವರು ಮಾತನಾಡಿದರು. ನಂತರ  SFI ರಾಜ್ಯಧ್ಯಕ್ಷರು ಆದ ಶಿವಪ್ಪರವರು ಮಾತನಾಡುತ್ತಾ ಶಿಕ್ಷಣದ ವ್ಯಾಪಾರಿಕರಣ ನಿಲ್ಲಬೇಕು, ಅದಲ್ಲದೆ ಇಂಜಿನಿಯರ್ ಅಲ್ಲದೆ ಮೆಡಿಕಲ್ ಕಾಲೇಜುಗಳು ಪ್ರತಿ ಜಿಲ್ಲೆಯಲ್ಲೂ ನಿರ್ಮಾಣವಾಗ ಬೇಕು. ಅದಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಾಸ್ಟೆಲ್ಗಳಿದ್ದರೂ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಯೋಗ್ಯವಾಗಿಲ್ಲ ಹಾಸ್ಟೆಲ್ ಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿಲ್ಲ ರಾಜ್ಯದೆಲ್ಲೆಡೆ ವಿದ್ಯಾರ್ಥಿ ಸ್ನೇಹಿ ಹಾಸ್ಟೆಲ್ ನಿರ್ಮಾಣ ಆಗಬೇಕೆಂದು ಆಗ್ರಹಿಸಿದರು.


ನಂತರ ಅರ್ಪಿತಾ SFI ರಾಜ್ಯ ಮುಖಂಡರು ಮತ್ತು DYFI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿರುವ ಸಂತೋಷ್ ಬಜಾಲ್ ರಾಜ್ಯಮಟ್ಟದ ಶೈಕ್ಷಣಿಕ ಜಾಥಾಕ್ಕೆ ಶುಭ ಹಾರೈಸಿದರು. ನಂತರ ಕಾರ್ಯಕ್ರಮದಲ್ಲಿ ಸಮುದಾಯ ಮಂಗಳೂರು ತಂಡದಿಂದ ವಿದ್ಯಾರ್ಥಿ ಯುವಜನರ ಸಮಸ್ಯೆಯಾದ ನಿರುದ್ಯೋಗದ ವಿರುದ್ಧ ಹಾಗೂ ಶಿಕ್ಷಣದ ಕೊರತೆ  ಆಗುವ ಸಮಸ್ಯೆಗಳನ್ನೊಳಗೊಂಡ ಸೈರನ್ ಎಂಬ ಬೀದಿನಾಟಕ ಪ್ರದರ್ಶನ ಮಾಡಲಾಯಿತು.


ಎಸ್ ಎಫ್ ಐ ರಾಜ್ಯಮಟ್ಟದ ಶೈಕ್ಷಣಿಕ ಜಾಥಾ ಅಕ್ಟೋಬರ್ 30ರಂದು ಹಾವೇರಿಯಲ್ಲಿ ಸಮಾರೋಪಗೊಳ್ಳಲಿರುವ ಜಾಥಾ ಮಂಗಳೂರಿಂದ ಉಡುಪಿ ಜಿಲ್ಲೆಗೆ ಬೀಳ್ಕೊಡಲಾಯಿತು.


ಕಾರ್ಯಕ್ರಮದಲ್ಲಿ SFI ಜಿಲ್ಲಾಧ್ಯಕ್ಷ ಇನಾಝ್ ಬಿ.ಕೆ., ವಿದ್ಯಾರ್ಥಿ ಮುಖಂಡರಾದ ಇಶಾನ್, ಅಫ್ರೋಸ್, ಹಸ್ಲಾನ್, DYFI ಮುಖಂಡರುಗಳಾದ  ರಿಜ್ವಾನ್ ಹರೇಕಳ, ಅಧಿತಿ ಬೆಳ್ತಂಗಡಿ, ಅಭಿಶೇಕ್ ಪದ್ಮುಂಜ ತೈಯೂಬ್, ಮತ್ತು ಮಾಧುರಿ ಬೋಳಾರ ಉಪಸ್ಥಿತರಿದ್ದರು. 


ಈ ಕಾರ್ಯಕ್ರಮವನ್ನು SFI ದ.ಕ. ಜಿಲ್ಲಾ ಕಾರ್ಯದರ್ಶಿ ವಿನುಷರಮಣ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಮುಖಂಡ ತಿಲಕ್ ರಾಜ್ ಕುತ್ತಾರ್ ವಂದಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article