ಪಡುಮಾರ್ನಾಡು: ಅಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಮೃತ್ಯು

ಪಡುಮಾರ್ನಾಡು: ಅಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಮೃತ್ಯು


ಮೂಡುಬಿದಿರೆ: ಪಡುಮಾನಾ೯ಡಿನಲ್ಲಿ ಯುವಕನೋವ೯ ಆವರಣಗೋಡೆ ಇಲ್ಲದ ಬಾವಿಗೆ ಅಕಸ್ಮಿಕವಾಗಿ ಆಯತಪ್ಪಿ ಬಿದ್ದು  ಮೃತಪಟ್ಟ ಘಟನೆ  ನಡೆದಿದೆ.

ಪಡುಮಾರ್ನಾಡು ಮುನ್ನೇರು ನಿವಾಸಿ ಬಾಲಕೃಷ್ಣ ಶೆಟ್ಟಿ (38) ಮೃತಪಟ್ಟ ಯುವಕ.

ಪಡುಮಾರ್ನಾಡಿನ ಮೊಡಂದೇಲ್ ಎಂಬಲ್ಲಿ ಈ ಘಟನೆ ನಡೆದಿದೆ.

ಎರಡು ದಿನದ ಹಿಂದೆ ಈ ಪರಿಸರದಲ್ಲಿ ಕಾರ್ಯಕ್ರಮವೊಂದು ನಡೆದಿದ್ದು ಆ ಕಾರ್ಯಕ್ರಮದಲ್ಲಿ ಈ ಯುವಕ ಭಾಗವಹಿಸಿದ್ದು ‌ಬಾವಿಗೆ ಆವರಣಗೋಡೆ ಇಲ್ಲದಿರುವುದು ಗಮನಕ್ಕೆ ಬಾರದೆ ಆಯತಪ್ಪಿ ಬಾವಿಗೆ ಬಿದ್ದಿದ್ದಾನೆನ್ನಲಾಗಿದೆ.

ಎರಡು ದಿನ ಕಳೆದ ನಂತರ ಅಂದರೆ ಇಂದು (ಗುರುವಾರ) ಮೃತದೇಹ ಪತ್ತೆಯಾಗಿದ್ದು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article