ಮಾನವೀಯತೆ ಸಮಾಜ ನಿರ್ಮಾಣ ಮಾಡುವುದೇ ರೆಡ್‌ಕ್ರಾಸ್‌ನ ಧ್ಯೇಯ: ನಿತ್ಯಶ್ರೀ ಬಿ.ವಿ.

ಮಾನವೀಯತೆ ಸಮಾಜ ನಿರ್ಮಾಣ ಮಾಡುವುದೇ ರೆಡ್‌ಕ್ರಾಸ್‌ನ ಧ್ಯೇಯ: ನಿತ್ಯಶ್ರೀ ಬಿ.ವಿ.


ಮಂಗಳೂರು: ಮಾನವೀಯತೆಯ ಸಮಾಜ ನಿರ್ಮಾಣ ಮಾಡುವುದೇ ರೆಡ್‌ಕ್ರಾಸ್‌ನ ಪ್ರಮುಖ ಧ್ಯೇಯ. ರೆಡ್‌ಕ್ರಾಸ್‌ನ ತತ್ವಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜನಿರ್ಮಾಣಮಾಡುವಲ್ಲಿ ಯುವಜನತೆ ಪಾತ್ರ ಮುಖ್ಯವಾದುದು ಎಂದು ಯೆನೆಪೋಯ (ಡೀಮ್ಡ್ ಟುಬಿ) ವಿಶ್ವವಿದ್ಯಾಲಯದ ಯುವ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ನಿತ್ಯಶ್ರೀ ಬಿ.ವಿ. ಹೇಳಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮಕಾರಂತ ಭವನದಲ್ಲಿ ನಡೆದ ಯುವ ರೆಡ್‌ಕ್ರಾಸ್ ಘಟಕದ ಅಭಿಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿಗೌಡ ಮಾತನಾಡಿ, ರೆಡ್‌ಕ್ರಾಸ್ ಸೇವೆ ಮಾಡಲು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶವನ್ನು ಒದಗಿಸಿಕೊಡುತ್ತದೆ. ಅದರಲ್ಲೂ ಕೊರೋನಾ ಸಂದರ್ಭದಲ್ಲಿ ನಗರದ ಪದವಿ ಕಾಲೇಜುಗಳ ಯುವ ರೆಡ್‌ಕ್ರಾಸ್‌ನ ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.

ಕಾರ್ಯಕ್ರಮ ಆಯೋಜನೆ ಮಾಡಿದ ಯುವ ರೆಡ್‌ಕ್ರಾಸ್‌ನ ಸಂಯೋಜಕಿ ಡಾ. ಭಾರತಿ ಪಿಲಾರ್ ಮಾತನಾಡಿ, ರೆಡ್‌ಕ್ರಾಸ್‌ನ ಸ್ವಯಂ ಸೇವಕನಾದವನು ಜೀವನ ಪರ್ಯಂತ ಸಮಾಜ ಮುಖಿ ಮನಸ್ಥಿತಿ ಹೊಂದಿರುತ್ತಾನೆ. ವಿದ್ಯಾರ್ಥಿಗಳಲ್ಲಿ ತಾಳ್ಮೆ, ಪರೋಪಕಾರ, ಸಹಬಾಳ್ವೆ, ಕರುಣೆ, ಮುಂತಾದ ಮೌಲ್ಯಗಳನ್ನು ರೂಢಿಸಿಕೊಳ್ಳುವುದರ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಹಾಗೂ ಸಮಾಜ ಅರಿಯುವ ಅವಕಾಶ ಮಾಡಿಕೊಡುತ್ತದೆ ಎಂದರು.

ವಿದ್ಯಾರ್ಥಿ ಕಾರ್ಯದರ್ಶಿ ಫರ್ನಾಜಬಾನು ವಂದಿಸಿ, ಮೇಘ ವಿ. ಶೇಟ್ ಕಾರ್ಯಕ್ರಮ ನಿರೂಪಿಸಿದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article