ಸನಾತನ ಸಂಸ್ಕೃತಿ ಭಾರತದ ವಿಕಾಸಕ್ಕೆ ಪೂರಕ: ಕ್ಯಾ. ಬ್ರಿಜೇಶ್ ಚೌಟ
ಎಕ್ಸ್‌ಪರ್ಟ್‌ನಲ್ಲಿ ದೀಪಾವಳಿ ಆಚರಣೆ
ವಳಚ್ಚಿಲ್ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ದೀಪಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಯದಿಂದ ಮುಕ್ತರಾಗಿ ಬದುಕುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಛಲ ಬಿಡದ ತ್ರಿವಿಕ್ರಮನಂತೆ ಸಾಧನೆ ಮಾಡಬೇಕು. ಸೋಲೇ ಗೆಲುವಿನ ಸೋಪಾನ ಎಂಬಂತೆ ಯಶಸ್ಸಿಗೆ ಹಲವು ಕಾರಣಗಳಿವೆ ಎಂದ ಅವರು ಕಲಿತ ನೆಲದ ಋಣ ಮರೆಯದೆ, ಸ್ಥಳೀಯ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಅವರು ದೀಪಾವಳಿ ಹಬ್ಬದ ಸಲುವಾಗಿ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಅವರು, ದೀಪದಂತೆ ಇತರರಿಗೆ ಬೆಳಕಾಗಿ ಬದುಕಬೇಕು. ಒಮ್ಮೆಲೇ ಉರಿದು ಅಲ್ಪಾಯುಷಿ ಆಗುವುದಕ್ಕಿಂತ ಹಣತೆಯಂತೆ ಬೆಳಗಬೇಕು ಎಂದು ತಿಳಿಸಿದರು.
ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ವಾಸ್ತುಶಿಲ್ಪಿ ದೀಪಿಕಾ ಎ. ನಾಯಕ್, ಉಪ ಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ, ಉಪ ಪ್ರಾಂಶುಪಾಲೆ (ಆಡಳಿತ) ಧೃತಿ ಎನ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರ್ದೇಶಕ ಡಾ. ವಿನಯಚಂದ್ರ ವಂದಿಸಿದರು. ಭವಿಷ್ ಬೆನಕ, ಜನ್ಯ ಶ್ರೀ, ಪಾವನಿ, ವೈಷ್ಣವಿ ಬಿ. ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಲಕ್ಷ್ಮೀ ಪೂಜೆ, ಕುಣಿತ ಭಜನೆ ಮತ್ತು ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ನಡೆಯಿತು.
