ಚಾಂದಿನಿ ಸುಳ್ಯ ಅವರ ಸಾವಿಗೆ ಆರೋಗ್ಯ ಇಲಾಖೆ, ಸರಕಾರ ನೇರ ಹೊಣೆ: ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ: ಡಿವೈಎಫ್‌ಐ

ಚಾಂದಿನಿ ಸುಳ್ಯ ಅವರ ಸಾವಿಗೆ ಆರೋಗ್ಯ ಇಲಾಖೆ, ಸರಕಾರ ನೇರ ಹೊಣೆ: ಆರೋಗ್ಯ ಸಚಿವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ: ಡಿವೈಎಫ್‌ಐ


ಮಂಗಳೂರು: ಸುಳ್ಯದ ನಾವೂರಿನ ಚಾಂದಿನಿ ಎಂಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯು ತೀರಾ ಅಪರೂಪದ ಮತ್ತು ವಿರಳ ಕಾಯಿಲೆಗೆ ತುತ್ತಾಗಿ ಸರಿಯಾದ ಚಿಕಿತ್ಸೆ ಹೊಂದಿಸಲು ಜೀವನ್ಮರಣ ಹೋರಾಟ ನಡೆಸಿ ಹೆಚ್ಚಿನ ಚಿಕಿತ್ಸೆ ಮತ್ತು ಸಹಾಯಕ್ಕೆ ಸರಕಾರದ ಗಮನ ಸೆಳೆದು ಕೊನೆಗೂ ಸರಕಾರದ ಆರೋಗ್ಯ ಇಲಾಖೆಯಿಂದ ಯಾವೊಂದು ಚಿಕಿತ್ಸಾ ಸಹಕಾರವನ್ನು ಪಡೆಯದೆ ಸಂತ್ರಸ್ತೆ ಚಾಂದಿನಿ ಸುಳ್ಯ ನಿನ್ನೆ ರಾತ್ರಿ ಕೊನೆಯುಸಿರೆಳೆದರು. ಚಾಂದಿನಿ ಸುಳ್ಯ ಅವರ ಅನಾರೋಗ್ಯಕ್ಕೆ ಸಕಾಲದಲ್ಲಿ ಚಿಕಿತ್ಸೆ ಒದಗಿಸುವಲ್ಲಿ ಬೇಜಾವಾಬ್ದಾರಿ ವಹಿಸಿರುವ ಸರಕಾರ, ಆರೋಗ್ಯ ಇಲಾಖೆಯ ನಡೆಯನ್ನು ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಖಂಡನೆಯನ್ನು ವ್ಯಕ್ತಪಡಿಸುತ್ತದೆ.

ಚಾಂದಿನಿ ಸುಳ್ಯ ಅವರು ಅಪರೂಪದ ಖಾಯಿಲೆಗೆ ಬಳಲುತ್ತಿರುವ ಬಗ್ಗೆ ಆರೋಗ್ಯ ಕ್ದೇತ್ರದಲ್ಲಿ ಮುಂದುವರಿದಿರುವ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಯಿಂದ ಹಿಡಿದು ಯಾವೊಂದು ಖಾಸಗೀ ಆಸ್ಪತ್ರೆಗೂ ಪತ್ತೆ ಹಚ್ಚಲು ಸಾಧ್ಯವಾಗದಿರೋದು ದುರಂತ. ಅಲ್ಲದೆ ಆಕೆ ಬಳಲುವ ಖಾಯಿಲೆಗೆ ಸರಿಯಾದ ಚಿಕಿತ್ಸೆ ಒದಗಿಸಲು ಸರಕಾರದ ಮುಂದೆ ಹಲವಾರು ವರುಷಗಳಿಂದ ಮನವಿ ಮೂಲಕ ತಿಳಿಸಲು ಪ್ರಯತ್ನಿಸಿದರು ಅದಕ್ಕೆ ಸರಿಯಾದ ಸ್ಪಂದನೆಗಳು ದೊರಯಲೇ ಇಲ್ಲ. ಇತ್ತೀಚೆಗೆ ಹೆಚ್ಚುವರಿ ಚಿಕಿತ್ಸೆಗೆ ಹೈದರಾಬಾದಿನ ಎಐಜಿ ಆಸ್ಪತ್ರೆಗೆ ದಾಖಲಾದಾಗ ಸಂತ್ರಸ್ತೆ ಬಳಲುತ್ತಿರುವ ಖಾಯಿಲೆ HYPER IGE MEDICATED MAST CELL ACTIVATION SYNDROME ಎಂದು ಪತ್ತೆ ಹಚ್ಚಿದರು. 

ಆ ಆಸ್ಪತ್ರೆಯು ಚಿಕಿತ್ಸೆಗೆ ವಿಧಿಸಿದ ವೆಚ್ಚವನ್ನು ಕಂಡ ಸಂತ್ರಸ್ತೆ ಅದನ್ನು ಬರಿಸಲು ಸಾಧ್ಯವಾಗದೇ ಇದ್ದಾಗ ಸರಕಾರ ಇನ್ನಾದರೂ ನೆರವಾಗಿ ಇಲ್ಲವೇ ದಯಾಮರಣವನ್ನಾದರೂ ಕರುಣಿಸಿ ಎಂದು ಪತ್ರ ಬರೆದರು. ಅಲ್ಲದೆ ಆರೋಗ್ಯಾಧಿಕಾರಿಗೆ ನನ್ನ ಸಾವಿಗೆ ಆರೋಗ್ಯ ಸಚಿವರು, ಸ್ಥಳೀಯ ಶಾಸಕರು, ಆರೋಗ್ಯ ಇಲಾಖೆ ನೇರ ಹೊಣೆ ಎಂದು ಆತ್ಮಹತ್ಯೆಗೈಯುವ ಎಚ್ಚರಿಕಾ ಸಂದೇಶ ಕಳುಹಿಸಿದ ನಂತರ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ನಾಡಿನ ಗಮನ ಸೆಳೆದಿದೆ. ಇಷ್ಟೆಲ್ಲಾ ಬೆಳವಣೆಗೆಗಳ ನಂತರವೂ ಸರಕಾರ, ಆರೋಗ್ಯ ಇಲಾಖೆ ಸಂತ್ರಸ್ತೆ ಚಾಂದಿನಿ ಸುಳ್ಯ ಅವರ ಚಿಕಿತ್ಸೆ?ಗೆ ಸ್ಪಂದಿಸುವಲ್ಲಿ ನಿಧಾನಗತಿಯನ್ನು ಅನುಸರಿಸಿದ್ದು ಇದರಿಂದ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗದ ಕಾರಣ ಸಂತ್ರಸ್ತೆಯು ಆರೋಗ್ಯ ಪರಿಸ್ಥಿತಿ ಸಂಪೂರ್ಣ ಹದಗೆಟ್ಟು ನಿರ್ಣಾಯಕ ಹಂತಕ್ಕೆ ತಲುಪಿ ದುರಂತ ಸಾವನ್ನು ಕಂಡಿರುವುದು ಆಘಾತಕಾರಿ ಅಂಶ. 

ಇಷ್ಟೆಲ್ಲಾ ತಂತ್ರಜ್ಞಾನ ಮುಂದುವರಿದ ಕಾಲದಲ್ಲಿ ವೈಧ್ಯಕೀಯ ಕ್ಷೇತ್ರಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದೆ ಇರುವ ಪ್ರಕರಣವನ್ನು ಸರಕಾರ, ಆರೋಗ್ಯ ಇಲಾಖೆ ಗಂಭೀರವಾಗಿ ಮತ್ತು ಸವಾಲಾಗಿ ಸ್ವೀಕರಿಸಬೇಕಿತ್ತು. ಇಷ್ಟೂ ಮಾಡಲು ಸಾಧ್ಯವಾಗದಿದ್ದಲ್ಲಿ ಕನಿಷ್ಟ ಸಂತ್ರಸ್ತೆ ಚಾಂದಿನಿ ಸುಳ್ಯ ಅವರ ಮನವಿಗೆ ಸ್ಪಂದಿಸಿ ಸೂಕ್ತ ಚಿಕಿತ್ತೆ ನೀಡಲು ಮುಂದಾಗಬೇಕಿತ್ತು . ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಸಮುದಾಯ ಅಭಿವೃದ್ದಿ ಹೆಸರಲ್ಲಿ ನೂರಾರೂ ಕೋಟಿ ಮೀಸಲಿಟ್ಟಿವೆ ಎಂದು ಕೊಚ್ಚಿಕೊಳ್ಳುವ ಸರಕಾರಕ್ಕೆ ಕನಿಷ್ಟ 50ಲಕ್ಷ ಬರಿಸಲು ಹಿಂದೇಟು ಹಾಕಿರುವ ನಡೆ ಈ ಸಮುದಾಯದ ಮೇಲಿರುವ ಕಾಳಜಿ ಎಷ್ಟೆಂದು ಜಗಜ್ಜಾಹೀರಾಗಿದೆ. ಸಂತ್ರಸ್ತೆ ಚಾಂದಿನಿ ಸಾವಿನ ಹೊಣೆಯನ್ನು ಸರಕಾರ, ಆರೋಗ್ಯ ಇಲಾಖೆ, ಆರೋಗ್ಯ ಸಚಿವರು ಹೊಣೆ ಹೊರಬೇಕಾಗಿದೆ.

ಅಪರೂಪದ ಖಾಯಿಲೆಗೆ ಸೂಕ್ತ ಚಿಕಿತ್ಸೆ ಒದಗದೆ ಸಾವನ್ನಪ್ಪಿದ ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಳ್ಯದ ಚಾಂದಿನಿ ಅವರ ಸಾವಿನ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು. ಸಂತ್ರಸ್ತೆ ಗೆ ಸರಕಾರ ಗರಿಷ್ಟ ಮಟ್ಟದ ಆರ್ಥಿಕ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು ಅಲ್ಲದೆ ರಾಜ್ಯದ ಆರೋಗ್ಯ ಇಲಾಖೆಗೆ ಸವಾಲಾಗಿದ್ದ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಹಾಗೂ ಸ್ಪಂದಿಸಲು ವಿಫಲರಾದ ಆರೋಗ್ಯ ಸಚಿವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ಡಿವೈಎಫ್‌ಐ ಸರಕಾರವನ್ನು ಆಗ್ರಹಿಸಿದೆ ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article