ಹಿಂದೂ ಜನಜಾಗೃತಿ ಸಮಿತಿಯಿಂದ ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನ: ‘ಹಲಾಲ್ ಪ್ರಮಾಣೀಕರಣ’ ನಿಲ್ಲಿಸುವಂತೆ ಒತ್ತಾಯ
ಮೊದಲು ಮಾಂಸಾಹಾರಕ್ಕೆ ಸೀಮಿತವಾಗಿದ್ದ ‘ಹಲಾಲ್’, ಈಗ ಸಕ್ಕರೆ, ಎಣ್ಣೆ, ಹಿಟ್ಟು, ಸೌಂದರ್ಯ ವರ್ಧಕಗಳು ಮತ್ತು ಔಷಧಿಗಳಂತಹ ಎಲ್ಲಾ ಉತ್ಪನ್ನಗಳಿಗೂ ವಿಸ್ತರಿಸಿದೆ. ಭಾರತದ ಅಧಿಕೃತ ಸಂಸ್ಥೆಗಳಾದ FSSAI ಮತ್ತು FDA ಇರುವಾಗ, ಪ್ರತ್ಯೇಕ ಧಾರ್ಮಿಕ ಪ್ರಮಾಣಪತ್ರದ ಅಗತ್ಯವೇನು ಎಂದು ಸಮಿತಿಯು ಪ್ರಶ್ನಿಸಿದೆ.
ಬೇಡಿಕೆಗಳು:
ಬಹುಸಂಖ್ಯಾತರ ಮೇಲೆ ಹೇರಿಕೆ: ಕೇವಲ ಶೇ. 15ರಷ್ಟು ಮುಸ್ಲಿಮರಿಗಾಗಿ ಶೇ. 85ರಷ್ಟು ಹಿಂದೂಗಳ ಮೇಲೆ ‘ಹಲಾಲ್’ ಉತ್ಪನ್ನಗಳನ್ನು ಹೇರಿಕೆ ಮಾಡಲಾಗುತ್ತಿದೆ.
ಆರ್ಥಿಕ ದುರುಪಯೋಗದ ಆತಂಕ: ‘ಹಲಾಲ್’ನಿಂದ ಬರುವ ಹಣವು ದೇಶದ ಭದ್ರತೆಗೆ ಹಾನಿ ಮಾಡುವ ಶಕ್ತಿಗಳಿಗೆ ಬಳಕೆಯಾಗುವ ಸಾಧ್ಯತೆ ಇದೆ ಎಂದು ಸಮಿತಿ ಎಚ್ಚರಿಸಿದೆ.
ಹಲಾಲ್ ಜಿಹಾದ್: ಈ ವ್ಯವಸ್ಥೆಯನ್ನು ಜಾಗತಿಕ ಆರ್ಥಿಕ ಯುದ್ಧ ಅಥವಾ ‘ಹಲಾಲ್ ಜಿಹಾದ್’ ಎಂದು ಕರೆದಿದ್ದು, ಭಾರತೀಯ ಆರ್ಥಿಕತೆಯನ್ನು ಉಳಿಸಲು ಇದನ್ನು ವಿರೋಧಿಸಬೇಕು ಎಂದು ಸಮಿತಿ ಹೇಳಿದೆ.
ಒಬ್ಬ ರಾಷ್ಟ್ರಭಕ್ತನಾಗಿ, ಮಾಲ್‌ಗಳು ಮತ್ತು ಮಾರುಕಟ್ಟೆಗಳಲ್ಲಿ ‘ಹಲಾಲ್ ಪ್ರಮಾಣಿತ’ ಉತ್ಪನ್ನಗಳ ಮಾರಾಟವನ್ನು ತಕ್ಷಣ ನಿಲ್ಲಿಸಿ, ‘ಹಲಾಲ್ ಮುಕ್ತ’ ಭಾರತ ನಿರ್ಮಾಣದ ದೃಷ್ಟಿಯಿಂದ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.
ಅಕ್ರಮ ‘ಹಲಾಲ್ ಪ್ರಮಾಣೀಕರಣ’ ವ್ಯವಸ್ಥೆಯ ಮೇಲೆ ದೇಶಾದ್ಯಂತ ನಿಷೇಧ ಹೇರುವ ಕುರಿತು ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ರಾಜು ಕೆ. ಅವರ ಮೂಲಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ತೀರ್ಥಷ್, ಈಶ್ವರ ಕೊಟ್ಟಾರಿ, ಹಿಂದೂ ಸೇವಾ ಸಮಿತಿಯ ಸುರೇಂದ್ರ ಜಪ್ಪಿನಮೊಗೇರು, ಯೋಗೀಶ್ ಜಪ್ಪಿನಮೊಗೇರು, ಹಿಂದೂ ಮಹಾಸಭಾದ ಲೋಹಿತ್ ಕೆ. ಸುವರ್ಣ, ಲೋಕೇಶ್ ಉಳ್ಳಾಲ, ನಾರಾಯಣ ಗುರು ಸೇವಾ ಸಮಿತಿಯ ದಿನಕರ್ ಪೂಜಾರಿ ಬಜಾಲ್, ಸಾಮಾಜಿಕ ಹೋರಾಟಗಾರರಾದ ಉಮೇಶ ರಾವ್, ಹಿಂದುತ್ವವಾದಿ ಶೇಖರ್ ಕೊಟ್ಟಾರಿ, ಧರ್ಮಪ್ರೇಮಿಗಳಾದ ರಾಜೇಂದ್ರ ಪೇಜಾವರ, ವಿದ್ಯಾ ಪೇಜಾವರ, ಜಯಪ್ರಕಾಶ್ ಪೂಜಾರಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಪವಿತ್ರಾ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.