ಜಿ.ಎಸ್.ಟಿ ಇಳಿಕೆಯಿಂದ ದೀಪಾವಳಿ ಸಂಭ್ರಮ ಇಮ್ಮಡಿಯಾಗಿದೆ
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೇಂದ್ರ ಸರಕಾರದ ಜಿ.ಎಸ್.ಟಿ ತೆರಿಗೆಯನ್ನು ಇಳಿಕೆ ಮಾಡಿದ್ದರ ಪರಿಣಾಮ ದೀಪಾವಳಿ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. ದೀಪಾವಳಿ ಹಬ್ಬದಂದು ವಸ್ತುಗಳ ದರ ಇಳಿಕೆಯಾದ ಪರಿಣಾಮ ಗ್ರಾಹಕರ ಖರೀದಿಯೂ ಹೆಚ್ಚಿದ್ದು ವ್ಯಾಪಾರ ವ್ಯವಹಾರಗಳು ಈ ವರ್ಷ ಹೆಚ್ಚಾಗಿರುವುದು ಎಲ್ಲರಲ್ಲೂ ಸಂತೋಷವನ್ನುಂಟು ಮಾಡಿದೆ. ಇಂದಿನ ದೀಪಾವಳಿ ಹಬ್ಬವು ಜಿ.ಎಸ್.ಟಿ. ದೀಪಾವಳಿ ಎಂದು ಹರ್ಷದಿಂದ ಹೇಳಬಹುದಾಗಿದೆ ಹಾಗೂ ಇದರ ಶ್ರೇಯಸ್ಸು ನಮ್ಮ ಕೇಂದ್ರ ಸರಕಾರಕ್ಕೆ ಹಾಗೂ ನರೇಂದ್ರ ಮೋದಿಜೀಯವರಿಗೆ ಸಲ್ಲುತ್ತದೆ ಹಾಗೂ ಜನ ಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಿ.ಎಸ್.ಟಿ. ತೆರಿಗೆ ಕಡಿಮೆ ಮಾಡುವಂತಹ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದಗೋಸ್ಕರ ನರೇಂದ್ರ ಮೋದಿಜೀಯವರಿಗೆ ಹಾಗೂ ಜನತೆಗೆ ಈ ಮೂಲಕ ದೀಪಾವಳಿಯ ಶುಭಾಶಯಗಳೊಂದಿಗೆ ಧನ್ಯವಾದವನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರುಗಳಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ. ಕಿಶೋರ್ ಕುಮಾರ್ ಪಿ, ಮಾಜಿ ಶಾಸಕರುಗಳಾದ ಕ್ಯಾ. ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪ್ರಶಾಂತ್ ಪೈ, ದೇವಪ್ಪ ಪೂಜಾರಿ, ಸಂಜಯ ಪ್ರಭು, ಗುರುಚರಣ್, ಸುದರ್ಶನ ಎಂ, ರವಿಶಂಕರ ಮಿಜಾರ್, ನಿತಿನ್ ಕುಮಾರ್, ಪ್ರಭಾಮಾಲಿನಿ, ರಮೇಶ್ ಹೆಗ್ಡೆ, ಡಾ. ಮಂಜುಳಾ ಅನಿಲ್ರಾವ್, ನಂದನ್ ಮಲ್ಯ, ಟಿ.ಎ. ಶಾನವಾಜ್, ಸಂದ್ಯಾವೆಂಕಟೇಶ್ ಕಾರ್ಯಕರ್ತರು ಉಪಸ್ಥಿತರಿದ್ದರು.