ಸ್ಪೀಕರ್ ಖಾದರ್ ಮಾದರಿ
ಮಂಗಳೂರು: ಇಂದಿನವರೆಗೂ ಸಾಮಾನ್ಯ ಜನರಿಗೆ ಸ್ಪೀಕರ್ ಕಚೇರಿ ಎಲ್ಲಿದೆ ಎಂದು ತಿಳಿದಿರಲಿಲ್ಲ, ಆದರೆ ಈಗ ಬಹುತೇಕ ಎಲ್ಲಾ ದಿನಗಳಲ್ಲೂ ಸ್ಪೀಕರ್ ಕಚೇರಿ ತಮ್ಮ ಸಮಸ್ಯೆಗಳೊಂದಿಗೆ ಬಂದ ಸಾಮಾನ್ಯ ಜನರಿಂದ ತುಂಬಿದೆ. ಈ ರೂಪಾಂತರದ ಕೀರ್ತಿ ಯು.ಟಿ.ಖಾದರ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಮೇಯರ್ ಶಶಿಧರ್ ಹೆಗ್ಡೆ ಹೇಳಿದ್ದಾರೆ.
ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಅವರು, ಎಲ್ಲಾ ಶಾಸಕರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದರಿಂದ ಹಿಡಿದು ರಾತ್ರಿ 12 ಗಂಟೆಯವರೆಗೆ ಅಧಿವೇಶನ ನಡೆಸುವವರೆಗೆ, ಯು.ಟಿ.ಖಾದರ್ ಅವರು ದೇಶದ ಎಲ್ಲಾ ಸಭಾಧ್ಯಕ್ಷರಿಗೆ ಮಾದರಿಯಾಗಿದ್ದಾರೆ.
ಸ್ಪೀಕರ್ ಆಗಿರುವವರು ಯಾವಾಗಲೂ ವಿಪಕ್ಷದ ಮಿತ್ರ ಆಗಿರಬೇಕು. ಈ ಮಾತನ್ನು ಅಕ್ಷರ ಪಾಲಿಸಿಕೊಂಡು ಬರುತ್ತಿರುವವರು ಸ್ಪೀಕರ್ ಯು.ಟಿ.ಖಾದರ್, ಈ ವಿಷಯದಲ್ಲಿ ಈ ಹಿಂದಿನವರು ಹೇಗಿದ್ದರೂ ಎನ್ನುವುದು ನಾನು ಹೆಚ್ಚು ಚರ್ಚೆಗೆ ಹೋಗುವುದಿಲ್ಲ. ಆದರೆ ಯು.ಟಿ.ಖಾದರ್ ಸ್ಪೀಕರ್ ಆದ ಬಳಿಕ ವಿಧಾನಸೌಧದ ವಿಧಾನಸಭೆಯ ಕಲಾಪದ ಚಿತ್ರಣವೇ ಬದಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.