ವಿಶೇಷ ಮಕ್ಕಳ ಶಾಲೆಗೆ ವ್ಯಾನ್ ಕೊಡುಗೆ
Sunday, October 26, 2025
ಮಂಗಳೂರು: ಸಿಎಸ್‌ಆರ್ ನಿಧಿಯಡಿ ಪಣಂಬೂರಿನ ಪಾರದೀಪ್ ಫಾಸ್ಪೆಟ್ಸ್‌ನಿಂದ ಕುಲಶೇಖರದಲ್ಲಿರುವ ಶ್ರೀ ದುರ್ಗಾ ನಡೆಸುತ್ತಿರುವ ಐಕ್ಯಮ್ ವಿಶೇಷ ಮಕ್ಕಳ ಶಾಲೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವ್ಯಾನ್‌ನ ಕೊಡುಗೆ ನೀಡಲಾಯಿತು.
ಪಿಪಿಎಲ್ ಕಂಪನಿಯ ಸಿಎಂಓ ಎಸ್. ಗಿರೀಶ್ ಅವರು ಸಂಸ್ಥೆಯ ವತಿಯಿಂದ ಸಿಎಸ್‌ಆರ್ ಯೋಜನೆ ಹಮ್ಮಿಕೊಂಡು ಅಗತ್ಯವುಳ್ಳ ಈ ಶಾಲೆಗೆ ಕೊಡುಗೆ ನೀಡಲಾಗಿದೆ ಎಂದರು.
ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಮಾತನಾಡಿ, ವಿಶೇಷ ಸಾಮರ್ಥ್ಯದ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದರ ಮೂಲಕ ಮುಖ್ಯ ವಾಹಿನಿಗೆ ತರಬೇಕಾಗಿದೆ ಎಂದರು.
ದುರ್ಗಾ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಕಮಲಾಕ್ಷಿ ಅವರು ಪಿಪಿಎಲ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಪಿಪಿಎಲ್ ಜೆಜಿಎಂ ಚೇತನ್ ಮೆಂಡೋನ್ಸ, ಸುರತ್ಕಲ್ ರೋಟರಿ ಕ್ಲಬ್ ಉಪಾಧ್ಯಕ್ಷ ರಮೇಶ್ ರಾವ್ ಮಧ್ಯ, ಕಾರ್ಯದರ್ಶಿ ರಾಮಮೋಹನ್ ವೈ, ಕ್ಲಬ್ ಸೇವಾ ನಿರ್ದೇಶಕ ಕೃಷ್ಣ ಮೂರ್ತಿ, ಪಬ್ಲಿಕ್ ಇಮೇಜ್ ನಿರ್ದೇಶಕ ಡಾ. ರಾಜಮೋಹನ್ ರಾವ್ ಕೆ., ದುರ್ಗಾ ಟ್ರಸ್ಟ್ ಪದಾಧಿಕಾರಿಗಳು, ರೋಟರಿ ಸದಸ್ಯರು ಉಪಸ್ಥಿತರಿದ್ದರು.
ದುರ್ಗಾ ಟ್ರಸ್ಟ್ ಕಾರ್ಯದರ್ಶಿ ಸಂತೋಷ್ ಕುಮಾರ್ ನಿರೂಪಿಸಿದರು.