ಮೂಡುಬಿದಿರೆ: 1.16 ಕೋ. ವೆಚ್ಚದ ಒಣ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ
Tuesday, October 28, 2025
ಮೂಡುಬಿದಿರೆ: ಇಲ್ಲಿನ ಪುರಸಭೆಯ ವಿವಿಧ ಅನುದಾನಗಳಿಂದ ಜ್ಯೋತಿನಗರ ಬಳಿ 1.16 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ಒಣ ತ್ಯಾಜ್ಯ ವಿಲೇವಾರಿ ಘಟಕವನ್ನು ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಉದ್ಘಾಟಿಸಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆ ವಹಿಸಿದರು.
ಪುರಸಭೆ ಮುಖ್ಯಾಧಿಕಾರಿ ಇಂದು.ಎಂ ಮಾಹಿತಿ ನೀಡಿ, ಪುರಸಭಾ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯ ಸಂಗ್ರಹಣೆ ಘಟಕ ಕಾಮಗಾರಿ ನಡೆದಿದೆ. 2021ರಿಂದ 25ನೇ ಸಾಲಿನವರೆಗಿನ 15ನೇ ಹಣಕಾಸು ನಿರ್ಬಂಧಿತ ಹಾಗೂ ಎಂಪಿಸಿ ಅನುದಾನದಡಿ ಘಟಕವನ್ನು ನಿರ್ಮಿಸಲಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು, ವಾರ್ಡ್ ಸದಸ್ಯೆ ರೂಪಾ ಸಂತೋಷ್ ಶೆಟ್ಟಿ, ಸದಸ್ಯರಾದ ಪಿ.ಕೆ ಥೋಮಸ್, ಪುರಂದರ ದೇವಾಡಿಗ, ಕೊರಗಪ್ಪ, ನವೀನ್ ಶೆಟ್ಟಿ, ಶಕುಂತಳಾ ದೇವಾಡಿಗ, ಜೊಸ್ಸಿ ಮೆನೇಜಸ್, ದಿವ್ಯಾ ಜಗದೀಶ್, ಸೌಮ್ಯ ಶೆಟ್ಟಿ, ಕುಶಾಲ, ನಾಮ ನಿರ್ದೇಶಿತ ಸದಸ್ಯೆ ಸರಸ್ವತಿ, ಮಾಜಿ ಸದಸ್ಯ ದಿನೇಶ್ ಪೂಜಾರಿ, ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪರಿಸರ ಅಭಿಯಂತರೆ ಶಿಲ್ಪಾ ಎಸ್., ಕಂದಾಯಾಧಿಕಾರಿ ಜ್ಯೋತಿ ಎಚ್., ಇಂಜಿನಿಯರ್ ನಳಿನ್ ಕುಮಾರ್ ಪಿ., ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ, ರೋಟರಿ ಟೆಂಪಲ್‌ಟೌನ್ ಅಧ್ಯಕ್ಷ ಹರೀಶ್ ಎಂ.ಕೆ, ಕಮ್ಯುನಿಟಿ ಮೊಬಿಲೈಸರ್ಸ್ ಉಪಸ್ಥಿತರಿದ್ದರು.
