ಮೂಡುಬಿದಿರೆ: ಬಿಜೆಪಿ ಮಹಾಶಕ್ತಿ ಕೇಂದ್ರಗಳ ಬಿಎಲ್ ಎ2 ಕಾಯಾ೯ಗಾರ
Wednesday, October 29, 2025
ಮೂಡುಬಿದಿರೆ: ಬಿಜೆಪಿ ಮುಲ್ಕಿ ಮೂಡುಬಿದಿರೆ ಮಂಡಲದ ಮೂಡುಬಿದಿರೆ ನಗರ, ಶಿರ್ತಾಡಿ, ಪುತ್ತಿಗೆ ಮಹಾಶಕ್ತಿ ಕೇಂದ್ರಗಳ ಬಿಎಲ್ ಎ2 ಕಾರ್ಯಗಾರವು ಮಂಗಳವಾರ ಕಾಮಧೇನು ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮುಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಎ.ಕೋಟ್ಯಾನ್ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಜಯಂತ್ ಕೋಟ್ಯಾನ್, ಸುನೀಲ್ ಅಳ್ವ, ಶಾಂತಿಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್, ಪ್ರಧಾನಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು ,ಹರಿಪ್ರಸಾದ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಾರ್ಯದರ್ಶಿಗಳು, ಮಹಾಘಟನಾಯಕರು, ಶಕ್ತಿಕೇಂದ್ರದ ಪ್ರಮಖರು, ಪುರಸಭೆ, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಕ್ಷದ ವಿವಿಧ ಜವಾಬ್ದಾರಿಯುತ ಪದಾಧಿಕಾರಿಗಳು, ಬೂತ್ ಬಿಎಲ್ ಎ2 ಗಳು ಉಪಸ್ಥಿತರಿದ್ದರು.