ನ.2 ರಂದು ಯಕ್ಷಗಾನ ಅಥ೯ಧಾರಿ ಎಂ. ಶ್ರೀಧರ ಪಾಂಡಿ ಸಾಣೂರು ಸಂಸ್ಮರಣೆ, ಪ್ರಶಸ್ತಿ ಪ್ರದಾನ
ಮೊದಲ ಬಾರಿಗೆ ಬಸದಿಯಲ್ಲಿ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನ:
ಸಂಸ್ಮರಣಾ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಎಂ. ಶ್ರೀಧರ ಪಾಂಡಿ ಸಾಣೂರು ಅವರು ರಚಿಸಿದ ಪ್ರಸಂಗವಾದ ‘ಜಿನಕಥೆಯ ದೊಂದಿ ಬೆಳಕಿನ ಯಕ್ಷಗಾನ ಶ್ರೀ ಪಾರ್ಶ್ವನಾಥ ಚರಿತೆ’ಯನ್ನು ಪ್ರಪ್ರಥಮ ಬಾರಿಗೆ ಬಸದಿಯಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕ ಮಹಾವೀರ ಪಾಂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಕೆ.ಎಂ. ರಾಘವ ನಂಬಿಯಾರ್, ಶ್ರೀ ಆದಿನಾಥ ಸ್ವಾಮಿ ಬಸದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೊ. ಕೆ. ಗುಣಪಾಲ ಕಡಂಬ ನಿವೃತ್ತ ಪ್ರಾಂಶುಪಾಲರಾದ ಡಾ. ಉದಯ ಕುಮಾರ್ ಇರ್ವತ್ತೂರು ಉಪಸ್ಥಿತರಿರುತ್ತಾರೆ.
ಸಮಾರಂಭದಲ್ಲಿ ವಾಗ್ಮಿ ಮುನಿರಾಜ ರೆಂಜಾಳ ಅಭಿನಂದನಾ ಭಾಷಣ ಮಾಡಲಿದ್ದಾರೆ ಅಜಿತ್ ಜೈನ ನಾರಾವಿ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.
ಪ್ರದರ್ಶನದ ಹಿಮ್ಮೇಳ ಮತ್ತು ಪಾತ್ರವರ್ಗದಲ್ಲಿ ಖ್ಯಾತ ಕಲಾವಿದರಾದ ಭಾಗವತರು-ದೇವಿಪ್ರಸಾದ್ ಆಳ್ವ, ಮದ್ದಳೆ- ಪದ್ಮನಾಭ ಉಪಾಧ್ಯಾಯ, ಚೆಂಡೆ-ಚೈತನ್ಯ ಕೃಷ್ಣ ಪದ್ಯಾಣ, ಚಕ್ರತಾಳ-ವೆಂಕಟೇಶ್, ಕಾರ್ಕಳ ಹಾಗೂ ಸ್ತ್ರೀ ಪಾತ್ರಧಾರಿಗಳಾದ ಅಕ್ಷಯ್ ಮಾರ್ನಾಡ್ ಮತ್ತು ಸುಷ್ಮಾ ಮೈರ್ಪಾಡಿ ಇರಲಿದ್ದಾರೆ.
ಮುನಿರಾಜ ರೆಂಜಾಳ, ಶ್ರೀರಮಣಾಚಾರ್, ಚಂದ್ರಶೇಖರ ಧರ್ಮಸ್ಥಳ, ಡಾ. ಶ್ರುತಕೀರ್ತಿರಾಜ ಉಜಿರೆ, ಗಣೇಶ್ ಶೆಟ್ಟಿ, ಮಹಾವೀರ ಪಾಂಡಿ, ಡಾ. ಪ್ರಭಾತ್ ಬಲ್ನಾಡ್ ಸೇರಿದಂತೆ ಹಲವು ಕಲಾವಿದರು ಪಾತ್ರವರ್ಗದಲ್ಲಿ ಸಹಕರಿಸಲಿದ್ದಾರೆ. ಸಮಗ್ರ ಕಾರ್ಯಕ್ರಮ ನಿರ್ವಹಣೆಯಲ್ಲಿ ಡಾ.ಪ್ರಭಾತ್ ಬಲ್ನಾಡ್ ಮತ್ತು ಜಯಶ್ರೀ ಅಧಿಕಾರಿ ಸಹಕರಿಸಲಿದ್ದಾರೆ ಎಂದರು.
ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಶ್ರೀಧರ್ ಪಾಂಡಿ ಅವರ ಪುತ್ರ ಶ್ರೀಕಾಂತ್ ಪಾಂಡಿ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಉಪಸ್ಥಿತರಿದ್ದರು.
