ಸಾಯಿ ಮಾನಾ೯ಡ್ ಸೇವಾ ಸಂಘದಿಂದ 80ನೇ ಸೇವಾ ಯೋಜನೆ ಹಸ್ತಾಂತರ
Friday, October 31, 2025
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನ ಬೆಟ್ಟು, ಪಡುಮಾರ್ನಾಡ್ ಇದರ 80ನೇ ಸೇವಾ ಯೋಜನೆಯ ಅಂಗವಾಗಿ ಅಕ್ಟೋಬರ್ ತಿಂಗಳ 2ನೇ ಯೋಜನೆಯನ್ನು ಕಡಂದಲೆ ಬಲ್ಲಾಡಿಯ ಅನಾರೋಗ್ಯ ಹೊಂದಿರುವ ಹನ್ನೆರಡರ ಹರೆಯದ ರಿತಿಕ್ ಆರ್. ಶೆಟ್ಟಿ ಅವರ ಚಿಕಿತ್ಸೆಗೆ ರೂ.10,000ನ್ನು ಹಸ್ತಾಂತರಿಸಲಾಯಿತು.
ತಾಲೂಕಿನ ಕಡಂದಲೆ ಗ್ರಾಮ ದ ಬಲ್ಲಾಡಿ ಮನೆ ಆದಿಶಕ್ತಿ ನಿಲಯದ ತ್ರಿವೇಣಿ- ರಾಜೇಶ್ ಶೆಟ್ಟಿ ಅವರ ಮಗನಾದ ರಿತಿಕ್ ಆರ್. ಶೆಟ್ಟಿ ( ರೋಗ ನಿರೋಧಕ ಶಕ್ತಿ ಯ ಕೊರತೆ ಯಿಂದ (primary immuno deficiency )ಬಳಲುತ್ತಿದ್ದು, ಇದಕ್ಕಾಗಿ ಅಸ್ತಿ ಮಜ್ಜೆ (bone marrow transplant )ನೀಡುವ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಲಕ್ಷದಲ್ಲಿ ಒಬ್ಬರಿಗೆ ಬರುವ ಕಾಯಿಲೆ ಯಾಗಿರುತ್ತದೆ. ಚಿಕಿತ್ಸೆಗೆ ಸುಮಾರು 50ರಿಂದ 55ಲಕ್ಷ ವೈದ್ಯಕೀಯ ವೆಚ್ಚ ಹಣ ಬೇಕಾಗಿರುತ್ತದೆ.
ರಿತಿಕ್ ಅವರಿಗೆ ಈ ಮೊದಲು ಹೃದಯ ಸಂಬಂದಿ ಚಿಕಿತ್ಸೆ ನಡೆದಿರುತ್ತದೆ. ರಿತಿಕ್ ನ ಪೋಷಕರು ತೀರಾ ಬಡವರಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಕಷ್ಟ ಕ್ಕೆ ಸ್ಪಂದಿಸಿ ಸೇವಾ ಸಂಘವು 80ನೇ ಸೇವಾ ಯೋಜನೆಯ 10,000 ರೂಪಾಯಿ ಚೆಕ್ಕನ್ನು ನೀಡಿ ಮಾನವೀಯತೆ ಮೆರೆದಿದೆ.