ತೀರ್ಥಹಳ್ಳಿ ಗೋಪಾಲ ಆಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಕಲೆ, ಅಭಿಮಾನಿಗಳ ಪ್ರೀತಿ, ಕಲಾವಿದರ ಸಂಸರ್ಗ ನನ್ನನ್ನು ಈ ಮಟ್ಟಕ್ಕೆ ಬೆಳೆಸಿವೆ.
ವಯೋ ಸಹಜ ಕಾರಣ ವಹಿಸಿಕೊಂಡ ಪಾತ್ರಕ್ಕೆ ಪೂರ್ಣ ನ್ಯಾಯ ಕೊಡಲಾಗದ ಸ್ಥಿತಿಯಲ್ಲಿ ಕಲಾ ವ್ಯವಸಾಯದಿಂದ ನಿವೃತ್ತಿ ಹೊಂದಿರುವೆನೆಂದರು.
ಸಮಿತಿಯ ಅಧ್ಯಕ್ಷ ಪುರೋಹಿತ ಎನ್.ಕೇಶವ ಆಚಾರ್ಯರ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಷ್ಠಾನದ ಸಂಚಾಲಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಗೇರುಕಟ್ಟೆ ದಿವಾಕರ ಆಚಾರ್ಯ ಅವರು ಅಕು೯ಳ ಸುಬ್ರಾಯ ಆಚಾರ್ಯರ ಸಂಸ್ಮರಣೆ ಗೈದರು.
ಶ್ರೀಮಠದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪುರೋಹಿತ ಜಿ.ಎಸ್. ಪುರಂದರ ಆಚಾರ್ಯ ಮುನಿಯಾಲು ಸಮ್ಮಾನ ಪತ್ರ ವಾಚಿಸಿದರು.
ಸಂಘಟಕ ರಾಜೇಶ್ ಪುರೋಹಿತರು, ಪ್ರತಿಷ್ಠಾನದ ಭಾರತಿ ಎಂ.ಎಲ್. ವಾಣಿ ಆಚಾರ್ಯ ಸಹಿತ ಸದಸ್ಯರು ಉಪಸ್ಮಿತರಿದ್ದರು.
ದಿನೇಶ ಶರ್ಮ ಕೊಯ್ಯೂರು ನಿರೂಪಿಸಿ, ವಂದಿಸಿದರು.
ಬಳಿಕ ನಡೆದ 'ಕರ್ಮಬಂಧ' ತಾಳಮದ್ದಳೆಯಲ್ಲಿ ದೇವರಾಜ ಆಚಾರ್ಯ ಐಕಳ, ಅಶೋಕ -ಯೋಗೀಶ ಆಚಾರ್ಯ ಉಳೆಪಾಡಿ, ಬೇಲಾಡಿ ಜಗದೀಶ, ಹಿರಣ್ಯ ವೆಂಕಟೇಶ, ಗಣೇಶ್ ಕನ್ನಡಿಕಟ್ಟೆ, ಗೇರುಕಟ್ಟೆ ದಿವಾಕರ, ದಿನೇಶ ಶರ್ಮ ಭಾಗವಹಿಸಿದ್ದರು.