 
ಇರುವೈಲಿನಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
Sunday, October 19, 2025
ಮೂಡುಬಿದಿರೆ: ಇರುವೈಲು ದೇವರಗುಡ್ಡೆಯಲ್ಲಿರುವ ರೇವತಿ ಪೂಜಾರ್ತಿ ಎಂಬವರ ಮನೆಗೆ ಶನಿವಾರ ಸಂಜೆ ಸಿಡಿಲು ಬಡಿದು  ಲಕ್ಷಾಂತರ ರೂ. ಹಾನಿಯಾಗಿದೆ. 
ವಿದ್ಯುತ್ ಹಾಗೂ ಇತರ ಉಪಕರಣಗಳು ಸುಟ್ಟು ಹೋಗಿವೆ. ಗೋಡೆ ಬಿರುಕು ಬಿಟ್ಟಿದೆ.
ಅವಘಡ ಸಂಭವಿಸಿದ ಸಮಯದಲ್ಲಿ  ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯ ವಿದ್ಯುತ್ ಉಪಕರಣಗಳು ಮತ್ತು ಇತರ ವಸ್ತುಗಳಿಗೆ ಹಾನಿಯಾಗಿದ್ದು ಸ್ಥಳಕ್ಕೆ ಇರುವೈಲು ಗ್ರಾಪಂ ನವೀನ್ ಪೂಜಾರಿ ಕಿಟ್ಟುಬೆಟ್ಟು ಮತ್ತು ನಾಗೇಶ್ ಅಮೀನ್ ಬಿಯಂದಕೋಡಿ  ಭೇಟಿ ನೀಡಿ ಪರಿಶೀಲಿಸಿದ್ದಾರೆ.




