ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾರ್ಥಿಗಳ ಎನ್.ಎಸ್.ಎಸ್. ಶಿಬಿರ ಸಮಾರೋಪ
ಈ ಶಿಬಿರದ ಅನುಭವಗಳು ನಮ್ಮ ಜೀವನದ ಬೇರೆ ಬೇರೆ ಮಜಲುಗಳ ಯಶಸ್ಸಿಗೆ ಪೂರಕವಾಗಿದೆ. ಇಂದು ವಿದ್ಯಾರ್ಥಿಗಳಾಗಿದ್ದವರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಏರಿದಾಗ ಬಡವರ ಪರ ಕಾಳಜಿ ವಹಿಸಲು ಇಂತಹ ಕ್ಯಾಂಪ್ ಗಳು ಪೂರಕ ಎಂದು ರಾಜ್ಯದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಶಿಬಿರವಾಣಿ ಬಿಡುಗಡೆಗೊಳಿಸಿ ಸಮಾರೋಪ ಭಾಷಣಗೈದು ಎನ್ ಎಸ್ ಎಸ್ ಅನುಭವಗಳು ವಿದ್ಯಾರ್ಥಿಗಳ ಕೌಟುಂಬಿಕ ಹಾಗೂ ಸಾಮಾಜಿಕ ಜೀವನದ ಬೆಳವಣಿಗೆಗೆ ಅತಿ ಅಗತ್ಯವಾಗಿದೆ ಎಂದು ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್, ಮೂಡುಮಾರ್ನಾಡು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಷ್ ಚಂದ್ರ ಚೌಟ, ಪಂಚಾಯತ್ ಸದಸ್ಯರಾದ ಶ್ರೀನಾಥ್ ಸುವರ್ಣ, ಸತೀಶ್ ಕರ್ಕೇರ, ಯಶೋಧ, ಶಕುಂತಲಾ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಶಾಲಾ ವಿಪಕ್ಷ ನಾಯಕಿ ಕುಮಾರಿ ಸಿಂಚನ, ಕೆಲ್ಲಪುತ್ತಿಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪ್ರಶಾಂತ್ ಎಸ್ ಅಮೀನ್, ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಡಾ. ಬಿ ರಾಜಶ್ರೀ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಿ ಜ್ಯೋತಿ ಡಿಸೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಿಬಿರಾಧಿಕಾರಿ ತೇಜಸ್ವಿ ಭಟ್, ಎನ್.ಎಸ್.ಎಸ್. ವಿದ್ಯಾರ್ಥಿ ನಾಯಕರಾದ ಹೃತಿಕ್ ಎಂ ಎನ್, ಸೃಷ್ಟಿದುರ್ಗ ವೇದಿಕೆಯಲ್ಲಿದ್ದರು. ಶಿಬಿರಕ್ಕೆ ಸಹಕರಿಸಿದ ಊರದಾನಿಗಳಿಗೆ ಪ್ರಮಾಣ ಪತ್ರದೊಂದಿಗೆ ಗೌರವಿಸಲಾಯಿತು. ಸ್ಪರ್ಧಾ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಯಿತು. ಎಕ್ಸಲೆಂಟ್ ಸಂಸ್ಥೆಗಳ ಟ್ರಸ್ಟಿ ಮನೋರಮ ಸಭೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಅದೀಶ್ ಅಮೃತ ಡಿ ಆಳ್ವ, ನವೀನ್, ಸಾಯಿ ದಿಗಂತ್, ಸಮಿತ್, ರಶ್ಮಿತಾ ಆರ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಸಹ ಶಿಬಿರಾಧಿಕಾರಿ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ಶಿಬಿರಾಧಿಕಾರಿ ತೇಜಸ್ವಿ ಭಟ್ ಧನ್ಯವಾದವಿತ್ತರು. ಸಂಧ್ಯಾ ನಾಯಕ್ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿಕ್ರಂ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
