ಅನಾಥ ಶವ ಪತ್ತೆ: ವಾರೀಸುದಾರರ ಮಾಹಿತಿಗೆ ಮನವಿ
Sunday, October 26, 2025
ಮೂಡುಬಿದಿರೆ: ಕಳೆದ ಮೂರು ದಿನಗಳ ಹಿಂದೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ಸ್ಟ್ಯಾಂಡ್ ಬಳಿ ವ್ಯಕ್ತಿಯೋವ೯ರ ಅನಾಥ ಮೃತದೇಹ ದೊರೆತಿದೆ.
ವ್ಯಕ್ತಿಯು ಕಳೆದ ಕೆಲವು ಸಮಯಗಳಿಂದ ಮೂಡುಬಿದಿರೆಯಲ್ಲಿ ಭಿಕ್ಷೆ ಬೇಡುತ್ತಿದ್ದರೆನ್ನಲಾಗಿದೆ. ಸದರಿಯವರ ವಾರಸುದಾರರ ಬಗ್ಗೆ ಮಾಹಿತಿ ತಿಳಿದು ಬಂದರೆ ಮೂಡುಬಿದಿರೆ ಪೊಲೀಸ್ ಠಾಣೆಗೆ (08258236333) ಅಥವಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ (9480802314)ಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.