ದ.ಕ ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟ
ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ. ಹಾಗೂ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಸ್ವರಾಜ್ಯ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ 2025-26ರ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಉಪನಿರ್ದೇಶಕಿ ರಾಜೇಶ್ವರಿ ಮಾತನಾಡಿ, ದ.ಕ. ಜಿಲ್ಲೆಯು ಕ್ರೀಡಾರಂಗದಲ್ಲಿ ಎದ್ದುಕಾಣಿಸುವ ಸಾಧನೆ ತೋರುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸುತ್ತಿದೆ. ಈಗಾಗಲೇ ನಮ್ಮ ಸರಕಾರ ಉತ್ತಮ ಸಾಧಕ ಕ್ರೀಡಾಳುಗಳಿಗೆ ಉದ್ಯೋಗದಲ್ಲಿ ಶೇ. 2ರ ಮೀಸಲಾತಿ ಪ್ರಕಟಿಸಿರುವುದು ಕ್ರೀಡಾಪಟುಗಳಿಗೆ ಚೇತೋಹಾರಿಯಾಗಿದೆ. ಒಲಿಂಪಿಕ್್ಸ ನಲ್ಲಿ ಚಿನ್ನ ಗೆಲ್ಲುವವರಿಗೆ 3 ಕೋಟಿ ರೂ., ರಜತ ಗೆಲ್ಲುವವರಿಗೆ 2 ಕೋಟಿ ಹಾಗೂ ಕಂಚಿನ ಪದಕ ಗೆಲ್ಲುವವರಿಗೆ ಒಂದು ಕೋಟಿ ರೂ.ವಿಶೇಷ ಬಹುಮಾನ ಘೋಷಿಸಿರುವುದನ್ನು ನಮ್ಮ ಕ್ರೀಡಾಪಟುಗಳು ಗಮನಿಸಿ ಇದಕ್ಕೆ ತಕ್ಕ ಪರಿಶ್ರಮ ಪಡುವ ಛಲವನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಆಳ್ವಾಸ್ ಪ.ಪೂ. ಕಾಲೇಜು ಪ್ರಾಚಾರ್ಯ ಪ್ರೊ. ಮೊಹಮ್ಮದ್ ಸದಾಕತ್ ಸ್ವಾಗತಿಸಿದರು.
ಜಿಲ್ಲಾ ಕ್ರೀಡಾಸಂಯೋಜಕ, ಎಡಪದವು ಸ್ವಾಮಿ ವಿವೇಕಾನಂದ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರೇಮನಾಥ ಶೆಟ್ಟಿ ಕಾವು, ಆಳ್ವಾಸ್ ಪ.ಪೂ. ಕಾಲೇಜಿನ ದೈ.ಶಿ. ಉಪನ್ಯಾಸಕ ನವೀನ್ ರೈ, ತಾ. ಕ್ರೀಡಾ ಸಂಯೋಜಕ, ಜೈನ ಪಿ.ಯು. ಕಾಲೇಜಿನ ದೈ.ಶಿ. ಉಪನ್ಯಾಸಕ ನವೀನ್ ಹೆಗ್ಡೆ ಉಪಸ್ಥಿತರಿದ್ದರು.
ಆಳ್ವಾಸ್ ಪ.ಪೂ. ಕಾಲೇಜಿನ ಕಲಾವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ನಿರೂಪಿಸಿ ವಂದಿಸಿದರು.
