ಅನಾರೋಗ್ಯ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
Thursday, October 30, 2025
ಮೂಡುಬಿದಿರೆ: ಶಿತಾ೯ಡಿ ಗ್ರಾ. ಪಂ. ವ್ಯಾಪ್ತಿಯ ದಡ್ಡಾಲಪಲ್ಕೆಯಲ್ಲಿ ಮಹಿಳೆಯೋವ೯ರು ಗುರುವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿರ್ತಾಡಿ ದಡ್ಡಾಲಪಲ್ಕೆಯ ನಿವಾಸಿ ಫ್ಲೋರಿನ್ ಡಿಸೋಜ ( 58) ಆತ್ಮಹತ್ಯೆ ಮಾಡಿಕೊಂಡವರು.
ಫ್ಲೋರಿನ್ ಅವರ ಮೂವರು ಮಕ್ಕಳು ವಿದೇಶದಲ್ಲಿದ್ದು ಮನೆಯಲ್ಲಿ ತಂಗಿಯೊಂದಿಗೆ ವಾಸವಾಗಿದ್ದರು. ಕಳೆದ ಕೆಲ ಸಮಯಗಳಿಂದ ಇವರಿಗೆ ಖಾಯಿಲೆಯೊಂದು ಬಾಧಿಸಿದ್ದು ಇದರಿಂದಾಗಿ ಮಾನಸಿಕವಾಗಿ ಜಿಗುಪ್ಸೆಗೊಂಡಿದ್ದರು. ತಂಗಿ ಶಿರ್ತಾಡಿ ಪೇಟೆಗೆ ಹೋಗಿದ್ದ ಸಂದರ್ಭದಲ್ಲಿ ತಮ್ಮ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಡುಬಿದಿರೆ ಅಗ್ನಿಶಾಮಕ ದಳದವರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.