ಗುಡ್ಡೆಮಠದ ಪ್ರಧಾನ ಅಚ೯ಕ ಲಕ್ಷ್ಮೀ ನಾರಾಯಣ ಭಟ್ ನಿಧನ
Thursday, October 30, 2025
ಮೂಡುಬಿದಿರೆ: ಕರಿಂಜೆ ದಿ. ರಾಮಕೃಷ್ಣ ಅಸ್ರಣ್ಣ ಅವರ ಪುತ್ರ, ಶ್ರೀ ಅನಂತಾಸನ ಮಠ (ಗುಡ್ಡೆಮಠ)ದ ಆಡಳಿತ ಮೊಕ್ತೇಸರ ಹಾಗೂ ಪ್ರಧಾನ ಅಚ೯ಕರಾಗಿದ್ದ ಲಕ್ಷ್ಮೀ ನಾರಾಯಣ ಭಟ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಪುತ್ತೂರಿನಲ್ಲಿ ನಿಧನರಾಗಿದ್ದಾರೆ.
ಅವರು ಧಾಮಿ೯ಕ ಮತ್ತು ಸಾಮಾಜಿಕವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಈ ಹಿಂದೆ ಕಲ್ಲಬೆಟ್ಟು ಸಹಕಾರಿ ಸಂಘದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು.