ವಿಶ್ವ ಆರೈಕೆದಾರರ ದಿನಾಚರಣೆ: ಸ್ಪೂತಿ೯ ವಿಶೇಷ ಶಾಲೆಯಲ್ಲಿ ಆರೈಕೆದಾರರಿಗೆ ಸನ್ಮಾನ
ಆಳ್ವಾಸ್ ಸಮಾಜಕಾಯ೯ ಕಾಲೇಜಿನ ಮುಖ್ಯಸ್ಥೆ ಡಾ. ಮಧುಮಾಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶೇಷ ಮಕ್ಕಳನ್ನು ಹಿಂದೆ ಹೆತ್ತವರು ಸಮಾಜದಿಂದ ದೂರ ಇರಿಸುತ್ತಿದ್ದರು. ಆಗ ಇಂತಹ ಮಕ್ಕಳಿಗೆ ಯಾವುದೇ ಅವಕಾಶಗಳು ಇರಲಿಲ್ಲ ಇದರೆ ಇಂದು ವಿಶೇಷ ಶಾಲೆಗಳಲ್ಲಿ ತರಬೇತಿಗಳು, ಸಮಸ್ಯೆಗೆ ಪೂರಕವಾದ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಅವಕಾಶಗಳಿವೆ. ಅಲ್ಲದೆ ಸಮಾಜದ ಮುಂದೆ ಪರಿಚಯಿಸುವ ಕೆಲಸಗಳನ್ನು ಶಾಲಾ ಶಿಕ್ಷಕರು ಮತ್ತು ಹೆತ್ತವರು ಮಾಡುತ್ತಿದ್ದಾರೆ ಎಂದ ಅವರು ಮಕ್ಕಳಲ್ಲಿ ಇನ್ನಷ್ಟು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಯಾರಿಗೂ ಹೊರೆಯಾಗದಂತೆ ಅವರ ಜೀವನವನ್ನು ರೂಪಿಸಿ ಎಂದು ಸಲಹೆ ನೀಡಿದರು.
ಗಾಮೀಣ ಪುನರ್ವಸತಿ ಕಾರ್ಯಕರ್ತರಾದ ಪ್ರಿಯಾಂಕಾ ಅವರು ಇಲಾಖೆಯ ವತಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ: ಆರೈಕೆದಾರರಾದ ಸುಜಾತ ಮತ್ತು ಜ್ಯೋತಿ ಶಾಂತಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು.
ಶಿಕ್ಷಕಿ ರಮ್ಯಾ ಸ್ವಾಗತಿಸಿದರು. ನಳಿನಿ ಮತ್ತು ಸುಮನ ಸನ್ಮಾನ ಪತ್ರ ವಾಚಿಸಿದರು. ಸುಚಿತ್ರಾ ಕಾಯ೯ಕ್ರಮ ನಿರೂಪಿಸಿದರು. ಸುರೇಖಾ ವಂದಿಸಿದರು.

