ವಿಶ್ವ ಆರೈಕೆದಾರರ ದಿನಾಚರಣೆ: ಸ್ಪೂತಿ೯ ವಿಶೇಷ ಶಾಲೆಯಲ್ಲಿ ಆರೈಕೆದಾರರಿಗೆ ಸನ್ಮಾನ

ವಿಶ್ವ ಆರೈಕೆದಾರರ ದಿನಾಚರಣೆ: ಸ್ಪೂತಿ೯ ವಿಶೇಷ ಶಾಲೆಯಲ್ಲಿ ಆರೈಕೆದಾರರಿಗೆ ಸನ್ಮಾನ


ಮೂಡುಬಿದಿರೆ: ಬೆಳುವಾಯಿಯ ಸ್ಪೂತಿ೯ ಭಿನ್ನ ಸಾಮಥ್ಯ೯ದ ಮಕ್ಕಳ ಶಾಲೆಯಲ್ಲಿ 'ವಿಶ್ವ ಆರೈಕೆದಾರರ ದಿನ'ವನ್ನು ಬುಧವಾರ ಆಚರಿಸಲಾಯಿತು. 


ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಶೇಷ ಮಕ್ಕಳನ್ನು ಆರೈಕೆ ಮಾಡಲು ತಾಳ್ಮೆ ಮತ್ತು ಆತ್ಮವಿಶ್ವಾಸ ಬೇಕು. ಮಕ್ಕಳ ದೈಹಿಕ ಸ್ವಚ್ಛತೆಯ ಬಗ್ಗೆ ಗಮನ ಹರಿಸಿ ರೋಗಗಳು ಬರದಂತೆ ತಡೆಗಟ್ಟಬೇಕು ಹಾಗೂ ಆರೋಗ್ಯ ಸಮಸ್ಯೆ ಬಂದಾಗ ಸೂಕ್ತ ತಪಾಸಣೆ ನಡೆಸಿ  ಚಿಕಿತ್ಸೆ ಪಡೆದುಕೊಳ್ಳಬೇಕು ಎಂದ ಅವರು ಆಯುಷ್ಮಾನ್ ಮತ್ತು ಅಭಾ ಕಾಡ್೯ಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.


ಶಾಲೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಆಳ್ವಾಸ್ ಸಮಾಜಕಾಯ೯ ಕಾಲೇಜಿನ ಮುಖ್ಯಸ್ಥೆ ಡಾ. ಮಧುಮಾಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶೇಷ ಮಕ್ಕಳನ್ನು ಹಿಂದೆ ಹೆತ್ತವರು ಸಮಾಜದಿಂದ ದೂರ ಇರಿಸುತ್ತಿದ್ದರು. ಆಗ ಇಂತಹ ಮಕ್ಕಳಿಗೆ ಯಾವುದೇ ಅವಕಾಶಗಳು ಇರಲಿಲ್ಲ ಇದರೆ ಇಂದು ವಿಶೇಷ ಶಾಲೆಗಳಲ್ಲಿ ತರಬೇತಿಗಳು, ಸಮಸ್ಯೆಗೆ ಪೂರಕವಾದ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಅವಕಾಶಗಳಿವೆ. ಅಲ್ಲದೆ ಸಮಾಜದ ಮುಂದೆ ಪರಿಚಯಿಸುವ ಕೆಲಸಗಳನ್ನು ಶಾಲಾ ಶಿಕ್ಷಕರು ಮತ್ತು ಹೆತ್ತವರು ಮಾಡುತ್ತಿದ್ದಾರೆ ಎಂದ ಅವರು ಮಕ್ಕಳಲ್ಲಿ ಇನ್ನಷ್ಟು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಯಾರಿಗೂ ಹೊರೆಯಾಗದಂತೆ ಅವರ ಜೀವನವನ್ನು ರೂಪಿಸಿ ಎಂದು ಸಲಹೆ ನೀಡಿದರು. 

ಗಾಮೀಣ ಪುನರ್ವಸತಿ ಕಾರ್ಯಕರ್ತರಾದ ಪ್ರಿಯಾಂಕಾ ಅವರು ಇಲಾಖೆಯ ವತಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸನ್ಮಾನ: ಆರೈಕೆದಾರರಾದ ಸುಜಾತ ಮತ್ತು ಜ್ಯೋತಿ ಶಾಂತಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. 

ಎಸ್.ಡಿ.ಎಂ.ಸಿ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು.

ಶಿಕ್ಷಕಿ ರಮ್ಯಾ ಸ್ವಾಗತಿಸಿದರು. ನಳಿನಿ ಮತ್ತು ಸುಮನ ಸನ್ಮಾನ ಪತ್ರ ವಾಚಿಸಿದರು. ಸುಚಿತ್ರಾ ಕಾಯ೯ಕ್ರಮ ನಿರೂಪಿಸಿದರು. ಸುರೇಖಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article