ಕೊಕ್ಕೋ ಬೆಳೆಯಲ್ಲಿ ಸುಧಾರಿತ ಕ್ರಮಗಳ ಮಾಹಿತಿ

ಕೊಕ್ಕೋ ಬೆಳೆಯಲ್ಲಿ ಸುಧಾರಿತ ಕ್ರಮಗಳ ಮಾಹಿತಿ


ಮೂಡುಬಿದಿರೆ: ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಕೊಕ್ಕೋ ಬೆಳೆಯಲ್ಲಿ ಸುಧಾರಿತ ಕ್ರಮಗಳ ಮಾಹಿತಿ ಕಾಯ೯ಕ್ರಮ ಸಮಾಜ ಮಂದಿರದಲ್ಲಿ ನೀಡಲಾಯಿತು.

ಉದ್ಯಮಿ ಪ್ರಭಾತ್ ಚಂದ್ರ ಜೈನ್ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೃಷಿಗೆ ಪ್ರಾಣಿಗಳ ಉಪಟಳ ಇದ್ದರೂ, ಉತ್ತಮ ಆರೋಗ್ಯಕ್ಕೆ ಹಟ್ಟಿ ಗೊಬ್ಬರದಿಂದ ಬೆಳೆದ ಬೆಳೆ ಹೆಚ್ಚು ಪರಿಣಾಮಕಾರಿ ಎಂದರು. 

ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೋಲಾರದ ಡಾ. ರಶ್ಮಿ ಆರ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಮಳೆಯ ನೀರಿನೊಂದಿಗೆ ಕೊಚ್ಚಿ ಹೋಗುವ ಮೇಲ್ಮಣ್ಣನ್ನು ಉಳಿಸಿಕೊಂಡಲ್ಲಿ ಫಲವನ್ನು ಹೆಚ್ಚಿಸಬಹುದಾಗಿದೆ. ಕೊಕ್ಕೋ ನಾಟಿಗೆ ಕನಿಷ್ಠ 18 ಫೀಟುಗಳ ಅಂತರ ಇರತಕ್ಕದ್ದು ಅಗತ್ಯ ಇರುವ ರಸ ಸಾರವನ್ನು ಒದಗಿಸಿ ಬೆಳೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು.

ಕೃಷಿ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. 

ಮಿಜಾರು ಹೊಸ ಮನೆ ವಿನಯ್ ಕುಮಾರ್ ಉಪಸ್ಥಿತರಿದ್ದರು. 

ಗುಣಪಾಲ ಮುದ್ಯ ಸ್ವಾಗತಿಸಿದರು. ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರೀಶ್ ಕೋಟ್ಯಾನ್ ವರದಿ ಮಂಡಿಸಿದರು. ಲಿಡ್ವಿನ್ ಡಿ ಕೋಸ್ತ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article