ಮಕ್ಕಳ ಆಸಕ್ತಿಯ ಕ್ಷೇತ್ರವನ್ನು ಪ್ರೋತ್ಸಾಹಿಸಿ: ಡಾ.ಸುಧೀರ್ ಹೆಗ್ಡೆ
ಅವರು ಇಲ್ಲಿನ ವೀರಮಾರುತಿ ಸಭಾಭವನದಲ್ಲಿ ಭಾನುವಾರ ನಡೆದ ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ವತಿಯಿಂದ ಹೆಗ್ಗಡೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ತಿನ ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ ಮಾತನಾಡಿ ಅಂಕ ಪಡೆಯುವುದು ಹಾಗೂ ಸಂಪಾದನೆ ಮಾಡುವುದು ಮಾತ್ರ ಶಿಕ್ಷಣ ಅಲ್ಲ. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವುದೆ ನಿಜವಾದ ಶಿಕ್ಷಣ ಎಂದರು.
ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಪ್ರಭಾಕರ ಹೆಗ್ಡೆ ಹಟ್ಟಾಜೆಗುತ್ತು ಅಧ್ಯಕ್ಷತೆ ವಹಿಸಿದ್ದರು.
ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ಯುವ ಕೈಗಾರಿಕೋದ್ಯಮಿ ಅಶ್ವತ್ಥ್ ಹೆಗ್ಡೆ ಬಳಂಜ, ಮುಂಬಯಿ ಹೆಗ್ಗಡೆ ಸಂಘದ ಪ್ರತಿನಿಧಿ ತಾರಾಮತಿ ಜಿ. ಹೆಗ್ಡೆ, ಬೆಂಗಳೂರು ಹೆಗ್ಗಡೆ ಸಂಘದ ಪ್ರತಿನಿಧಿ ಶ್ರೀನಾಥ್ ಹೆಗ್ಡೆ, ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ್ ಹೆಗ್ಡೆ ಉಪಸ್ಥಿತರಿದ್ದರು.
ಸಮಾಜದ ವಿವಿಧ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು.
ಸುಧೀಕ್ಷಾ, ಸಾಕ್ಷಿ ಮತ್ತು ಅನುಷ ಸನ್ಮಾನ ಪತ್ರ ವಾಚಿಸಿದರು. ಸದಾಶಿವ ಹೆಗ್ಡೆ, ಪ್ರಶಾಂತ್ ಹೆಗ್ಡೆ, ಚೇತನಾ ರಾಜೇಂದ್ರ ಹೆಗ್ಡೆ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದವರ ಪಟ್ಟಿ ವಾಚಿಸಿದರು.
ಸಂಘದ ಕಾರ್ಯದರ್ಶಿ ಶುಭರಾಜ ಹೆಗ್ಡೆ ಸ್ವಾಗತಿಸಿದರು. ಸುಂದರ ಹೆಗ್ಡೆ ವೇಣೂರು ಕಾಯ೯ಕ್ರಮ ನಿರೂಪಿಸಿದರು. ಅನಿಲ್ ಹೆಗ್ಡೆ ವಂದಿಸಿದರು.