ಶಿಸ್ತಿನೊಂದಿಗೆ ಸಕಾರಾತ್ಮಕ ಮನೋಭಾವವೇ ಯಶಸ್ಸಿನ ಕೀಲಿಕೈ: ವಿವೇಕ್ ಆಳ್ವ

ಶಿಸ್ತಿನೊಂದಿಗೆ ಸಕಾರಾತ್ಮಕ ಮನೋಭಾವವೇ ಯಶಸ್ಸಿನ ಕೀಲಿಕೈ: ವಿವೇಕ್ ಆಳ್ವ


ಮೂಡುಬಿದಿರೆ: ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯಲ್ಲಿ ವಿದ್ಯಾರ್ಥಿಗಳು ತೊಡಗುವುದರಿಂದ ಶಿಸ್ತಿನ ಜೀವನಶೈಲಿಯನ್ನು ಬೆಳೆಸಿಕೊಳ್ಳಬಹುದು ಎಂದು  ಆಳ್ವಾಸ್  ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.


ಅವರು ಮೂಡುಬಿದಿರೆ ಕನ್ನಡಭವನದಲ್ಲಿ ಸೋಮವಾರ ನಡೆದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಚೇರಿ, ರಾಜ್ಯ ಪ್ರಧಾನ ಕಚೇರಿ, ದಕ್ಷಿಣ ಕನ್ನಡ ಘಟಕ, ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡಬಿದಿರೆ ಸಂಯುಕ್ತ ಆಶ್ರಯದಲ್ಲಿ ನಡೆದ ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ಉದ್ಯಮಶೀಲತೆ ಹಾಗೂ  ಸ್ಟೆಮ್ ವಿಷಯಗಳ ಐದು ದಿನಗಳ ರಾಷ್ಟ್ರೀಯ ಮಟ್ಟದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಮನಸ್ಸು ಸಕಾರಾತ್ಮಕವಾಗಿ ವರ್ತಿಸಿದಾಗ ಎಲ್ಲವೂ ಧನಾತ್ಮಕವಾಗಿ ಮೂಡಿಬರುತ್ತದೆ.  ಪ್ರತೀ ಕೆಲಸದಲ್ಲೂ ನಂಬಿಕೆ ಮತ್ತು ನಿಷ್ಠೆ ಅತಿ ಮುಖ್ಯ. ಅದೇ ಸದ್ಗುಣ ವ್ಯಕ್ತಿಯನ್ನು ಶ್ರೇಷ್ಠತೆಯೆಡೆಗೆ ಕೊಂಡೊಯ್ಯುತ್ತದೆ.  ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೂಲಕ ನೀವು ಕಲಿತಿರುವ ಮೌಲ್ಯಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಿ. ಈ ಕರ‍್ಯಗಾರದಲ್ಲಿ ಪಡೆದ ಕೌಶಲ್ಯವನ್ನು ಆಳವಡಿಸಿಕೊಂಡು, ಬದುಕನ್ನು ರೂಪಿಸುವಲ್ಲಿ ಕರ‍್ಯಪ್ರವೃತ್ತರಾಗಿ ಎಂದು ಕರೆ ಕೊಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾಎಂ ಮೋಹನ ಆಳ್ವ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಗೌರವಿಸಿದರು.  ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನವದೆಹಲಿ ಮಾಜಿ ನಿರ್ದೇಶಕ ಕೃಷ್ಣಸ್ವಾಮಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಅವಲೇಂದ್ರ ಶರ್ಮಾ, ಸತ್ಯಜಿತ್ ಚಟರ್ಜಿ, ಬಿಎಂ ತುಂಬೆ, ಪ್ರತಿಮ್‌ಕುಮಾರ್, ನವೀನಚಂದ್ರ ಅಂಬೂರಿ, ಭರತ್‌ರಾಜ್,  ಜಯವಂತಿ ಸೋನ್ಸ್, ಶುಭಾ ವಿಶ್ವನಾಥ್  ಸಸ್ಯಶಾಸ್ತç ವಿಭಾಗದ ಮುಖ್ಯಸ್ಥ ಡಾ ಸುಕೇಶ್,  ಹಾಗೂ ಎಐ ಮತ್ತು ಎಂಎಲ್ ವಿಭಾಗದ ಮುಖ್ಯಸ್ಥ ಡಾ ಹರೀಶ್ ಕುಂದರ್ ಇದ್ದರು. ನಿಖಿತಾ ಕರ‍್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article