ಎನ್‌ಎಂಪಿಎ: 53 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ
Thursday, October 30, 2025
ಮಂಗಳೂರು: ಮುಂಬೈನ ಬಾಂಬೆ ಎಕ್ಸಿಬಿಷನ್ ಸೆಂಟರ್‌ನಲ್ಲಿ ಆರಂಭವಾದ ಐದು ದಿನಗಳ ಇಂಡಿಯಾ ಮೆರಿಟೈಮ್ ಸಪ್ತಾಹ (ಐಎಂಡಬ್ಲ್ಯೂ) -2025 ಸಮಾವೇಶದ ಎರಡನೇ ದಿನ ಮಂಗಳವಾರ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಸುಮಾರು 53 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದೆ.
ಎಂಆರ್‌ಪಿಎಲ್, ಎಗಿಸ್, ಪೋಪಾಕ್, ರಿಲಯನ್ಸ್, ಎಚ್‌ಪಿಎಲ್, ಜೆಎಂಪಿಎಲ್ ಮತ್ತು ಐಸಿಆರ್‌ಸಿಎಲ್ ಮೊದಲಾದ ೧೮ ವಿವಿಧ ಉದ್ಯಮಗಳ ಜತೆ ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ ಸಹಿ ಹಾಕಿದರು. ಇವರೊಂದಿಗೆ ಪಶ್ಚಿಮ ಕರಾವಳಿಯಲ್ಲಿ ಹೂಡಿಕೆ ಸಾಮರ್ಥ್ಯ ವೃದ್ಧಿಗೆ ಸಾಕ್ಷಿಯಾಯಿತು. ಬಂದರು ಪ್ರವಾಸೋದ್ಯಮ ಕುರಿತ ಅಧಿವೇಶನದಲ್ಲಿ ಮಾತನಾಡಿದ ಡಾ. ರಮಣ, ಭಾರತದ ಬೆಳವಣಿಗೆಗೆ ಕ್ರೂಸ್ ಸಾಮರ್ಥ್ಯ, ತಡೆ ಹಿಡಿದ ಪ್ರಯಾಣಿಕ ಅನುಭವ, ಡಿಜಿಟಲೀಕರಣ, ತೀರ ಶಕ್ತಿ ಆಳವಡಿಕೆ ಮತ್ತು ಹಸಿರು ಪ್ರವಾಸಿ ಮೂಲ ಸೌಕರ್ಯದ ಅಗತ್ಯವನ್ನು ವಿವರಿಸಿದರು.
ಕರ್ನಾಟಕ ಬಂದರು ಸಚಿವ ಮಂಕಾಳ ವೈದ್ಯ, ಎನ್‌ಎಂಪಿಎ ಪೆವಿಲಿಯನ್ ಭೇಟಿ ಸಂದರ್ಭದಲ್ಲಿ ಅಧ್ಯಕ್ಷರ ನಾಯಕತ್ವನ್ನು ಶ್ಲಾಘಿಸಿದರು. 2)19-2025ರ ಅವಧಿಯಲ್ಲಿ ಎನ್‌ಎಂಪಿಎಲ ನಾಲ್ಕು ಪಟ್ಟು ಹೆಚ್ಚಳ ಲಾಭ ಗಳಿಸಿದ್ದು, ಭಾರತದ ಅತ್ಯಂತ ದಕ್ಷ ಮತ್ತು ಸುಸ್ಥಿರ ಬಂದರುಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂದರು.