ಒಡ್ಡೂರು ಫಾಮ್೯ನ ಗೋಶಾಲೆಯಲ್ಲಿ ಗೋ ಪೂಜೆ ಮತ್ತು ಸಾಮೂಹಿಕ ಯೋಗಭ್ಯಾಸ
ನಗರದ ಸಂಚಾಲಕರು ಜನಾರ್ಧನ, ಭರತ್ ಮಟ್ಟಿ, ದೇವದಾಸ್ ಕೊಳತ್ತಾಮಜಲು, ಸುಜಾತಾ ಕುಕ್ಕಿಪಾಡಿ ದೀಪ ಬೆಳಗಿಸಿ ಚಾಲನೆ ನೀಡಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳ್ಳಿಪಾಡಿ ಗುತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾಮೂಹಿಕ ಯೋಗಭ್ಯಾಸ, ಗಣಪತಿ ನಮಸ್ಕಾರ, ವಿಷ್ಣು ನಮಸ್ಕಾರವನ್ನು ಯೋಗ ಶಿಕ್ಷಕರಾದ ನಯನ ಬೆಂಜನಪದವು, ಶೋಭಾ ಮಟ್ಟಿ, ಕುಮಾರ ಕೈಕಂಬ ನಡೆಸಿಕೊಟ್ಟರು. ಪ್ರಾತ್ಯಕ್ಷಿತೆಯನ್ನು ಭವಿನ್, ದೇವದಾಸ್, ಶಶಿಕಲಾ, ವನಿತಾ ನಡೆಸಿಕೊಟ್ಟರು..
ದೀಪಾವಳಿ ಹಾಗೂ ಗೋ ಪೂಜೆಯ ಮಹತ್ವ ಹಾಗೂ ಗೋವು ಸಂರಕ್ಷಣೆಯಿಂದ ನಮಗೆ ಮತ್ತು ಪ್ರಕೃತಿಗೆ ಆಗುವ ಪ್ರಯೋಜನಗಳನ್ನು ಶಿಕ್ಷಕ ಅರುಣ್ ಆರಂಬೊಡಿ ತಿಳಿಸಿದ್ದರು.
ಪುರೋಹಿತರಾದ ದೀಪಕ್ ಶರ್ಮ ಅವರ ನೇತೃತ್ವದಲ್ಲಿ ಲಕ್ಶ್ಮೀ ಪೂಜೆ, ಕಲಶ ಪೂಜೆ ಬಳಿಕ ಗೋವುಗಳ ಪೂಜೆಯನ್ನು ಬಾಲಕೃಷ್ಣ ಮತ್ತು ಪದ್ಮಾವತಿ ದಂಪತಿಗಳ ಸಹಕಾರದಿಂದ ನೆರವೇರಿಸಿದರು.
ವಿಶ್ವಕರ್ಮ ಸೀತಾರಾಮ ಆಚಾರ್ಯ ಅವರು ಕರ್ಣವೇದನ ಮತ್ತು ಮೂಗುತಿ ಧಾರಣೆ ನಡೆಸಿಕೊಟ್ಟರು ಮತ್ತು ಅಗ್ನಿಹೋತ್ರ ಕೃಷ್ಣಪ್ಪ ಆರಂಬೊಡಿ ದಂಪತಿಗಳು ನಡೆಸಿದ್ದರು.
ನಗರದಿಂದ ಸುಮಾರು 300 ಯೋಗಬಂಧುಗಳು ಪೊಳಲಿ, ಕೈಕಂಬ, ಕಾಜಿಲ, ಬೆಂಜಾನಪದವು, ಮಟ್ಟಿ, ಅಶ್ವಥಪುರ, ಮಿಜಾರು, ಕುಕ್ಕಿಪಾಡಿ, ಸಿದ್ದಕಟ್ಟೆ, ರಾಯಿ, ಹನ್ನೆರಡು ಕವಲು, ಆರಂಬೊಡಿ, ಅರಳ, ಸುವರ್ಣನಾಡು ಶಾಖೆಗಳಿಂದ ಜೋಡಿಸಿಕೊಳ್ಳಲಾಯಿತು. ಜಿಲ್ಲಾ ಪ್ರಮುಖರಾದ ಅನಿತಾಪ್ರಸನ್ನ, ಲೋಕೇಶ್ ಪೊಳಲಿ, ಶಿವಪ್ರಸಾದ್ ಪೊಳಲಿ, ಪ್ರಶಾಂತ್ ಕುಕ್ಕಟ್ಟೆ,ನಿತಿನ್ ಅರಳ,ಕೇಶವ ಕಾವೇರಿ, ಮೋಹನದಾಸ್ ಪೊಳಲಿ, ಸುರೇಂದ್ರ ಸಿದ್ದಕಟ್ಟೆ, ಸ್ಮಿತಾ ಕಡೆಗುಂಡ್ಯ, ಶಶಿಕಲಾ ಕುಕ್ಕಿಪಾಡಿ,ಉಪಸ್ಥಿತರಿದ್ದರು.
ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕ ಭರತ್ ವಂದಿಸಿದರು