ಶರತ್ ಗೋರೆ ಅವರಿಗೆ ಗೌರವ ಡಾಕ್ಟರೇಟ್
Sunday, October 12, 2025
ಮೂಡುಬಿದಿರೆ: ನ್ಯೂ ವೈಬ್ರಂಟ್ ಪಿಯು ಕಾಲೇಜಿನ ಟ್ರಸ್ಟಿ ಹಾಗೂ ನಿರ್ದೇಶಕರು ಹಾಗೂ ಬ್ರೈಟ್ ಹೊರೈಜನ್ ಇಂಟರ್ನ್ಯಾಷನಲ್ ಸ್ಕೂಲ್ನ ಸಂಸ್ಥಾಪಕರಾಗಿರುವ ಶರತ್ ಗೋರೆ ಅವರಿಗೆ, ಭೌತಶಾಸ್ತ್ರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಅಸಾಧಾರಣ ಸೇವೆಗಾಗಿ ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ, ಡೆಲವೇರ್ (ಅಮೇರಿಕಾ) ಅವರು ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಿಸಿ ಗೌರವಿಸಿದ್ದಾರೆ.
ಈ ಗೌರವ ಪ್ರಶಸ್ತಿ ಅಕ್ಟೋಬರ್ 11 ರಂದು ಪುದುಚೇರಿಯ ಕಂಬನ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನಿಸಲಾಯಿತು.
ಈ ಪ್ರಶಸ್ತಿ ಅವರ ಭೌತಶಾಸ್ತ್ರ ಕ್ಷೇತ್ರದ ಜ್ಞಾನ, ಶಿಕ್ಷಣ ಕ್ಷೇತ್ರದ ನಿಷ್ಠೆ, ವಿದ್ಯಾರ್ಥಿ ಕೇಂದ್ರಿತ ದೃಷ್ಟಿಕೋನ ಮತ್ತು ಸಾಮಾಜಿಕ ಬದ್ಧತೆಯ ಪ್ರತಿಫಲವಾಗಿದೆ.