ಮೂಡುಬಿದಿರೆಯಲ್ಲಿ ಗಾಳಿ ಮಳೆ: ಮರ ಧರೆಗೆ, ತುಂಡಾದ ವಿದ್ಯುತ್ ಕಂಬ, ವಾಹನ ಸಂಚಾರಕ್ಕೆ ತೊಂದರೆ

ಮೂಡುಬಿದಿರೆಯಲ್ಲಿ ಗಾಳಿ ಮಳೆ: ಮರ ಧರೆಗೆ, ತುಂಡಾದ ವಿದ್ಯುತ್ ಕಂಬ, ವಾಹನ ಸಂಚಾರಕ್ಕೆ ತೊಂದರೆ


ಮೂಡುಬಿದಿರೆ: ತಾಲೂಕಿನಲ್ಲಿ  ಶನಿವಾರ ಸಂಜೆ ಬೀಸಿದ ಗಾಳಿ ಮಳೆಗೆ ಸಮಾಜ ಮಂದಿರದ ಬಳಿ ಮರವೊಂದು ಸೀಯಾಳದ ಅಂಗಡಿ ಮೇಲೆ ಬಿದ್ದು ಜಖಂಗೊಂಡಿದೆ ಹಾಗೂ ಅಲ್ಲಿಯೇ ಪಕ್ಕದಲ್ಲಿರುವ ವಿದ್ಯುತ್ ಕಂಬವು ತುಂಡಾಗಿ ಫ್ಲೆಕ್ಸ್ ನ ಮೇಲೆ ಬಿದ್ದು ಸಿಲುಕಿಕೊಂಡಿರುವುದರಿಂದ ಸಂಭಾವ್ಯ ಅಪಾಯ ತಪ್ಪಿದ ಘಟನೆ ನಡೆದಿದೆ.


ಆಲಂಗಾರು ಮತ್ತು ಉಳಿಯ ಪರಿಸರದಲ್ಲಿಯೂ ತೀವೃವಾದ ಗಾಳಿ ಬೀಸಿದ ಪರಿಣಾಮವಾಗಿ ಸಂತ ಥೋಮಸ್ ಹೈಸ್ಕೂಲ್ ನ ಮೇಲ್ಛಾವಣಿ  ಹಾರಿ ಸುಮಾರು 100 ಮೀಟರ್ ದೂರದಲ್ಲಿ ಬಿದ್ದಿದ್ದು , ಕೆಲವು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ ಮತ್ತು ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದಿದೆ ಅಲ್ಲದೆ ರಸ್ತೆಗೆ ಅಡ್ಡವಾಗಿ ಬಿದ್ದ ಮರದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.











Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article