ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಕಮಾಂಡ್ ದ ಕ್ರೌಡ್ ಲೀಡರ್ಷಿಪ್ ಕಮ್ಯುನಿಕೇಷನ್ ಮಾಸ್ಟರ್ ಕ್ಲಾಸ್’ ಕಾರ್ಯಗಾರ

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಕಮಾಂಡ್ ದ ಕ್ರೌಡ್ ಲೀಡರ್ಷಿಪ್ ಕಮ್ಯುನಿಕೇಷನ್ ಮಾಸ್ಟರ್ ಕ್ಲಾಸ್’ ಕಾರ್ಯಗಾರ


ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ‘ಕಮಾಂಡ್ ದ ಕ್ರೌಡ್ ಲೀಡರ್ಷಿಪ್ ಕಮ್ಯುನಿಕೇಷನ್ ಮಾಸ್ಟರ್ ಕ್ಲಾಸ್’ ಕಾರ್ಯಗಾರವನ್ನು ಕಾಲೇಜಿನ ಸ್ಪಂದನ ಸೆಮಿನಾರ್ ಹಾಲಿನಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜೆಸಿಐ ರಾಷ್ಟ್ರೀಯ ತರಬೇತುದಾರ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಮಾತನಾಡಿ, ಸಂತ ಫಿಲೋಮಿನಾ ಕಾಲೇಜು ಅನೇಕ ಪ್ರಮುಖ ನಾಯಕರನ್ನು ನಿರ್ಮಿಸಿದೆ ಮತ್ತು ವಿದ್ಯಾರ್ಥಿಗಳಿಗೆ ಅಮೂಲ್ಯವಾದ ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಒದಗಿಸಿದೆ. ಇಂತಹ ಸಂಸ್ಥೆ ವ್ಯಕ್ತಿಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸದಿಂದ ಅವರನ್ನು ಸಜ್ಜುಗೊಳಿಸುತ್ತಿದೆ ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವ. ಡಾ. ಆಂಟೋನಿ ಪ್ರಕಾಶ್ ಮೊಂತೇರೊ ಅವರು ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯದ ಅಗತ್ಯವಿದೆ. ಹೊಸ ಆಲೋಚನೆಗಳು ಬೆಳವಣಿಗೆ ಮತ್ತು ಕಲಿಕೆಗೆ ಅತ್ಯಗತ್ಯ. ಬದಲಾವಣೆಯನ್ನು ಸ್ವೀಕರಿಸುವುದು ಮತ್ತು ಅಳವಡಿಸಿಕೊಳ್ಳುವುದು, ಜೀವನದ ಸವಾಲುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಲು ಸಹಾಯ ಮಾಡುತ್ತದೆ. ಅರ್ಥಪೂರ್ಣ ಸಂಬಂಧಗಳನ್ನು ನಿರ್ಮಿಸಲು ಪರಿಣಾಮಕಾರಿ ಸಂವಹನ ಅತ್ಯಗತ್ಯ ಎಂದು ಹೇಳಿದರು.


ಐಕ್ಯೂಎಸಿ ಸಂಯೋಜಕ ಡಾ. ಎಡ್ವಿನ್ ಡಿಸೋಜಾ, ಇಂಗ್ಲೀಷ್ ಉಪನ್ಯಾಸಕಿ ನೋವಿಲ್ಲಿನ್ ಡಿಸೋಜ, ಡಾ. ವಿನಯ ಚಂದ್ರ, ರಿಜಿಸ್ಟ್ರಾರ್ (ಪರೀಕ್ಷಾಂಗ), ಡಾ. ಗೀತಾ ಪೂರ್ಣಿಮಾ, ಬಿಬಿಎ ಉಪನ್ಯಾಸಕ ಪ್ರಶಾಂತ್ ರೈ ಉಪಸ್ಥಿತರಿದ್ದರು.


ಅಪರ್ಣ ಮತ್ತು ಬಳಗ ಪ್ರಾರ್ಥನೆ ನೆರವೇರಿಸಿದರು. ಇಂಗ್ಲೀಷ್ ಉಪನ್ಯಾಸಕಿ ಸುಷ್ಮಾ ಕ್ರಾಸ್ತ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಇಂಗ್ಲಿಷ್ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್. ರೈ ಸ್ವಾಗತಿಸಿ, ವಿನಿಲ್ ಡಿಸೋಜ ಅವರು ವಂದಿಸಿದರು. ಸೃಷ್ಟಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ‘ಆರ್ಟ್ ಆಫ್ ಸ್ಪೀಕಿಂಗ್ ಅಂಡ್ ಪವರ್ ಆಫ್ ಲೀಡಿಂಗ್’ ಹಾಗೂ ‘ಕಾಂಪಿಟೇಟಿವ್ ಎಡ್ಜ್: ಸ್ಕಿಲ್ಸ್ ಫಾರ್ ಸಕ್ಸಸ್’ ಎಂಬ ವಿಷಯಗಳ ಮೇಲೆ ತರಬೇತಿ ನೀಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article