
ಸಿಡಿಲಿಗೆ ಅಪಾರ ಹಾನಿ: ಐದು ಮಂದಿಗೆ ಗಾಯ
Monday, October 20, 2025
ಪುತ್ತೂರು: ರವಿವಾರ ಸಾಯಂಕಾಲ ಸುರಿದ ಭಾರೀ ಗಾಳಿ ಮಳೆಯ ಸಂದರ್ಭ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಯಾಗಿದ್ದು, ಮನೆಯಲ್ಲಿದ್ದ ಮಗು ಸಹಿತ ಐದು ಮಂದಿ ಸಣ್ಣಪುಟ್ಟ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ನರಿಮೊಗ್ರು ಗ್ರಾಮದ ಬೆದ್ರಾಳದಲ್ಲಿ ನಡೆದಿದೆ.
ಬೆದ್ರಾಳ ನಿವಾಸಿ ದಯಾನಂದ ಮೂಲ್ಯ ಅವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಹಂಚಿನ ಛಾವಣಿ ಸಂಪೂರ್ಣ ತುಂಡಾಗಿ ಹೋಗಿದೆ. ಗೋಡೆ ಕುಸಿತಗೊಂಡಿದ್ದು, ಒಂದು ಭಾಗಕ್ಕೆ ಹಾಕಿದ್ದ ಸಿಮೆಂಟ್ ಶೀಟ್ ಹಾನಿಯಾಗಿದೆ. ಮನೆಯ ಪಕ್ಕದಲ್ಲಿ ವಿದ್ಯುತ್ ಪರಿವರ್ತಕವಿದ್ದು, ಇದರ ಪರಿಣಾಮದಿಂದ ಸಿಡಿಲು ಬೀಳುವ ಸಂದರ್ಭ ಮನೆಗೆ ಸಮಸ್ಯೆಯಾಗುದೆ ಎಂದು ಹೇಳಲಾಗಿದೆ. ಮನೆ ಮಂದಿಗೆ ಹೆಂಚಿನ ತುಂಡುಗಳು ಬಿದ್ದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.