ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಇಸ್ನ್ಟಿಟ್ಯೂಶನ್ಸ್ ಇನೊವೇಶನ್ ಡೇ’

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಇಸ್ನ್ಟಿಟ್ಯೂಶನ್ಸ್ ಇನೊವೇಶನ್ ಡೇ’


ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇಸ್ನ್ಟಿಟ್ಯೂಶನ್ಸ್ ಇನೊವೇಶನ್ ಕೌನ್ಸಿಲ್ ಹಾಗೂ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ‘ಇಸ್ನ್ಟಿಟ್ಯೂಶನ್ಸ್ ಇನೊವೇಶನ್ ಡೇ’ ಅನ್ನು ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅತಿಥಿಗಳು ಡಾ. ಎಪಿಜೆ ಅಬ್ದುಲ್ ಕಲಾಂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಮಾಡಿದರು. 


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ನಾವೀನ್ಯತೆಯ ಬಗ್ಗೆ ಮಾತನಾಡುವಾಗ ನಮ್ಮ ಹೃದಯದಲ್ಲಿ ತಕ್ಷಣ ಹೊಳೆಯುವ ಹೆಸರು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು. ಜನರ ರಾಷ್ಟ್ರಪತಿ ಮತ್ತು ಮಿಸೈಲ್ ಮ್ಯಾನ್ ಆಫ್ ಇಂಡಿಯಾ. ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ನಮಗೆ ಸ್ಪೂರ್ತಿದಾಯಕ. ಡಾ. ಕಲಾಂ ಅವರು ಕುತೂಹಲ, ಸೃಜನಶೀಲತೆ ಮತ್ತು ಕರ್ತವ್ಯಬೋಧೆಯ ಜೀವಂತ ಪ್ರತಿರೂಪವಾಗಿದ್ದರು. ಅವರ ವ್ಯಕ್ತಿತ್ವ, ಚಿಂತನೆಗಳು, ಜ್ಞಾನ, ಹಾಗೂ ಶಿಸ್ತು ಅನುಕರಣೀಯ. ಯುವ ಜನರೇ ಭಾರತದ ಅಮೂಲ್ಯ ಆಸ್ಥಿ ಎಂದು ಅವರು ಸದಾ ಹೇಳುತ್ತಿದ್ದರು. 

ಅವರು ಪ್ರತಿಯೊಬ್ಬ ವಿದ್ಯಾರ್ಥಿಯೂ ಕೇವಲ ಆಲೋಚನೆಗಳ ಗ್ರಾಹಕನಲ್ಲ, ಆಲೋಚನೆಗಳ ಸೃಷ್ಟಿಕರ್ತನಾಗಬೇಕೆಂದು ಕನಸಿದ್ದವರು. ಜೀವನದಲ್ಲಿ ಯಶಸ್ಸನ್ನು ಕಾಣಬೇಕೆಂದಿದ್ದಲ್ಲಿ ನಾವೆಲ್ಲರೂ ಸಪ್ತ ಭಯಗಳನ್ನು ಕೈ ಬಿಟ್ಟು ಧೈರ್ಯದಿಂದ ಮುನ್ನಡೆಯಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಹಿರಿಯ ವಿದ್ಯಾರ್ಥಿ ಯುವ ಉದ್ಯಮಿ ಕೃಷ್ಣಾನಂದ ನಾಯಕ್ ಮಾತನಾಡಿ, ನಾವೀನ್ಯತೆ ಒಂದು ಮನಸ್ಥಿತಿ. ಸಂಶೋಧನೆ ಮತ್ತು ನಾವೀನ್ಯತೆ ಇಂದಿನ ಕಾಲಘಟ್ಟದಲ್ಲಿ ಅಗತ್ಯವಾಗಿಯೂ ಅನುಸರಿಸಬೇಕಾದ ವಿಷಯಗಳು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಬ್ಬ ಸಂಶೋಧಕ, ಅವಿತುಕೊಂಡಿರುತ್ತಾನೆ. ಸೂಕ್ತ ಅವಕಾಶಗಳು ಹಾಗೂ ಮಾರ್ಗದರ್ಶನ ದೊರೆತಲ್ಲಿ ಪ್ರತಿಯೋರ್ವ ವ್ಯಕ್ತಿಯೂ ಉದ್ಯಮಿಯಾಗಿ ಯಶಸ್ಸನ್ನು ಕಾಣಬಹುದು. ಭಯ, ವೈಫಲ್ಯ ಮತ್ತು ಹತಾಶೆ ನಾವೀನ್ಯತೆಯ ಮೂರು ಶತ್ರುಗಳು. ಇವುಗಳನ್ನು ಸಮರ್ಥವಾಗಿ ಎದುರಿಸಿದಲ್ಲಿ ಯಶಸ್ವಿ ಉದ್ಯಮ ಸ್ಥಾಪಿಸಬಹುದಾಗಿದೆ ಎಂಬ ಸಂದೇಶ ನೀಡಿದರು.

ಸಭಾ ಕಾರ್ಯಕ್ರಮದ ಬಳಿಕ ಕೃಷ್ಣಾನಂದ ನಾಯಕ್ ಅವರು ಉದ್ಯಮಶೀಲತೆಯ ಬಗ್ಗೆ ಉಪನ್ಯಾಸ ನೀಡಿದರು. ಹಲವು ಯಶಸ್ವಿ ಉದ್ಯಮಗಳ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಸೂಕ್ಷ್ಮತೆಯ ಬಗ್ಗೆ ಮನವರಿಕೆ ಮಾಡಿಸಿದರು. 

ವಿದ್ಯಾರ್ಥಿನಿಯರಾದ ಶ್ರೇಯ ಮತ್ತು ಶೀತಲ್ ಪ್ರಾರ್ಥನೆ ನೆರವೇರಿಸಿದರು. ಕಾಲೇಜಿನ ಐಐಸಿ ಘಟಕದ ಸಂಯೋಜಕಿ ಡಾ. ಗೀತಾ ಪೂರ್ಣಿಮಾ ಕೆ. ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕರಾದ ಹರ್ಷಿತ್ ಆರ್. ವಂದಿಸಿದರು. ಫಾತಿಮತ್ ರಫೀಸಾ ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ. ವಿನಯಚಂದ್ರ ಉಪಸ್ಥಿತರಿದ್ದರು. ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article