ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ರಾಷ್ಟೀಯ ಏಕತಾ ದಿನಾಚರಣೆ’

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ರಾಷ್ಟೀಯ ಏಕತಾ ದಿನಾಚರಣೆ’


ಪುತ್ತೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಸ್ಮರಿಸಲು ಮತ್ತು ಭಾರತದ ರಾಷ್ಟ್ರೀಯ ಮತ್ತು ರಾಜಕೀಯ ಏಕೀಕರಣ ಹಾಗೂ ಒಗ್ಗಟ್ಟನ್ನು ಬೆಳೆಸುವಲ್ಲಿ ಅವರ ಮಹತ್ವದ ಪಾತ್ರವನ್ನು ಗೌರವಿಸಲು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ ವತಿಯಿಂದ ಅಕ್ಟೋಬರ್ 31ರಂದು ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟೀಯ ಏಕತಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮದಲ್ಲಿ ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಬೋಮಾರೆಡ್ಡಿ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಸಂದೇಶವನ್ನು ನೀಡಿ, ದೇಶದ ಸಂವಿಧಾನಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿ ಭಾರತದ ಪ್ರಥಮ ಉಪಪ್ರಧಾನಮಂತ್ರಿ ಹಾಗೂ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ದೃಢ ನಿರ್ಧಾರದಿಂದ ದೇಶವನ್ನು ನಿರ್ಮಿಸಿದರು. ಇವರು ಕೈಗೊಂಡ ನಿರ್ಧಾರಗಳಿಂದ ಮತ್ತು ದೇಶಭಕ್ತಿಯಿಂದ ಹಾಗೂ ಇವರ ಪ್ರಾಮಾಣಿಕತೆಗೆ ಇವರನ್ನು ಉಕ್ಕಿನ ಮನುಷ್ಯ ಎಂದು ಕರೆಯಲಾಗಿದೆ ಎಂದು ಹೇಳಿದರು.


ಸಾರ್ವಜನಿಕರಲ್ಲಿ ಏಕತೆಯನ್ನು ಮೂಡಿಸಲು ಏಕತೆಗಾಗಿ ಓಟವನ್ನು ನಡೆಸಿ ನಾವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಮೆಚ್ಚುಗೆಯನ್ನು ಸಲ್ಲಿಸಿ, ಪ್ರಶಂಸಿಸಬೇಕು. ದೇಶವನ್ನು ಒಗ್ಗೂಡಿಸಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಡಿದರು. ದೇಶದ ಐಕ್ಯತೆಗೆ, ಸಾರ್ವಭೌಮತ್ವಾಕ್ಕೆ ಮತ್ತು ದೇಶದ ಪ್ರಗತಿಗೆ ಅಪಾರವಾದ ದೇಣಿಗೆಯನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.


ಸಂತ ಪಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು ಸ್ವಾಗತಿಸಿದರು.


ಡಿವೈಎಸ್ಪಿ ಅರುಣ್ನಾಗೇಗೌಡ, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ, ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್, ಸಹಿತ ನಗರ, ಸಂಚಾರ, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐಗಳು ಹಾಗೂ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ, 5 ಕರ್ನಾಟಕ ಎನ್.ಸಿ.ಸಿ. ನೌಕಾದಳ ಕೆಡೆಟ್‌ಗಳು, ರೋವರ್ಸ್-ರೆಂಜರ್ಸ್, ಎನ್‌ಎಸ್‌ಎಸ್ ಸ್ವಯಂ ಸೇವಕರು ಮತ್ತು ಯೂತ್ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು ಏಕತಾ ಓಟದಲ್ಲಿ ಭಾಗವಹಿಸಿದರು. ಕಾಲೇಜು ಕ್ಯಾಂಪಸ್‌ನಿಂದ ಹೊರಟ ಓಟ ಕಲ್ಲಾರೆ ಬಳಿಯಿಂದ ಹಿಂದಿರುಗಿ ಕ್ಯಾಂಪಸ್‌ನಲ್ಲಿ ಸಮಾರೋಪಗೊಂಡಿತು.


ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೆರಾ, ನೆವಲ್ ವಿಂಗ್ ಅಧಿಕಾರಿಯಾದ ತೇಜಸ್ವಿ ಭಟ್ ಕೆ., ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಚಂದ್ರಶೇಖರ್ ಕೆ. ಮತ್ತು  ಪುಷ್ಪಾ ಎನ್., ಯೂತ್ ರೆಡ್‌ಕ್ರಾಸ್ ಘಟಕದ ಅಧಿಕಾರಿಗಳಾದ ಡಿಂಪಲ್ ಜೇನಿಫರ್ ಫೆರ್ನಾಂಡಿಸ್ ಮತ್ತು ಸುಷ್ಮಾ ಕ್ರಾಸ್ತಾ, ರೋವರ್ಸ್ ರೆಂಜರ್ಸ್ ಅಧಿಕಾರಿಗಳಾದ ಖಾಳಂದರ್ ಶರೀಫ್ ಮತ್ತು ಶ್ರೀರಕ್ಷಾ ಬಿ.ವಿ., ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಡಾ. ರಾಧಾಕೃಷ್ಣ ಗೌಡ ಮತ್ತು ಸ್ಪರ್ಲ್ ಫಿಯೋನಾ ಪಿರೇರಾ, ಕಾಲೇಜಿನ ಉಪ ಪ್ರಾಶುಂಪಾಲರಾದ ಡಾ. ವಿಜಯಕುಮಾರ್ ಮೊಳೆಯಾರ್, ಪಿಆರ್‌ಒ ಭಾರತಿ ಎಸ್. ರೈ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article