ಉಡುಪಿ-ದ.ಕ. ಜಿಲ್ಲೆಯಲ್ಲಿ ಭೋವಿ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ: ಅಕ್ರೋಶ
ಶಿರ್ವ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೋವಿ ಜನಾಂಗದವರಿಗೆ ಭೋವಿ(ಪರಿಶಿಷ್ಟ ಜಾತಿ)ಪ್ರಮಾಣ ಪತ್ರ ಸುಮಾರು ವರ್ಷಗಳಿಂದ ನೀಡುತ್ತಿಲ್ಲ. ಹಿಂದಿನ ಕೆಲವರಿಗೆ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ ಪ್ರಸ್ತುತವಾಗಿ ಕೆಲವು ವರ್ಷಗಳಿಂದ ಅರ್ಜಿ ಸಲ್ಲಿಸಿದರೆ ವಲಸೆ ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕು. ಇಲ್ಲದಿದ್ದರೆ ಆಗುವುದಿಲ್ಲವೆಂದು ಕಳಿಸುತ್ತಾರೆ.
ಇಲ್ಲದಿದ್ದರೆ ತಂದೆ ಅಥವಾ ಅಜ್ಜನದ್ದು ತನ್ನಿ ಎಂದು ಕೆಲವಾರು ಕಾರಣಗಳಿದ ಹಿಂದೆ ಕಳಿಸುತ್ತಾರೆ. ಇಡೀ ಕರ್ನಾಟಕದಲ್ಲಿ 31 ಜಿಲ್ಲೆಗಳಲ್ಲಿ 29 ಜಿಲ್ಲೆಗಳಲ್ಲಿ ನೀಡುತ್ತಿದ್ದಾರೆ. ಆದರೆ ಅವಿಭಾಜ್ಯ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಯಾಕೆ ನೀಡುತ್ತಿಲ್ಲ. 29 ಜಿಲ್ಲೆಗೆ ಒಂದು ಕಾನೂನು ಆದರೆ ನಮ್ಮ 2 ಜಿಲ್ಲೆಗೆ ಮತ್ತೊಂದು ಕಾನೂನು.
ಈ ಸಮಸ್ಯೆಯಿಂದ ಭೋವಿ ಜನಾಂಗದ ಮಕ್ಕಳು ಕಂಗಾಲು ಆಗಿದ್ದಾರೆ. ವಿದ್ಯಾಭ್ಯಾಸ ಮಾಡಲು ಮತ್ತು ಉದ್ಯೋಗ ಪಡೆಯಲು ಜಾತಿ ಪ್ರಮಾಣ ಪತ್ರ ಇಲ್ಲದೆ ಕಂಗಾಲು ಆಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರವು ಇದರ ಬಗ್ಗೆ ಸರಿಯಾಗಿ ಪರಿಶೀಲಿಸಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಭೋವಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕಾಗಿ ಭೋವಿ ಮುಖಂಡ ಪವನ್ ಕುಮಾರ್ ಶಿರ್ವ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.